ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?ಸೇಂದಿ ಅಂಗ್ಡಿ ಮುಂಗಟಿನ್ ಸಾಲಾಗ್ ನಿಂತೆ ನಾ;ಬಿರಟೆ ತಿರಗ್ಸಿ ಮುನಿಯ ತುಂಬ್ದ ಒಂದು ಬುಂಡೆ ನಾ;ಎತ್ತಿ ಎತ್ತಿ ಕುಡ್ತಿದ್ದಂಗೆ ಒಂದೊಂದ್ ಗುಟ್ಕು ನಾ!ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಪಕ್ದಲ್ ನಿಂತಿದ್ ವೈದನ್ ಮ್ಯಾಗೆ ಕೈಯ್ಯ ಮಡಗ್ದೆ ನಾ;ಏಟೊ ವರ್ಸದ್ ನೆಂಟನ್ ಥರ ಮಾತೀಗ್ ಕುಂತೆ ನಾ;ಬುಂಡೆ ಖಾಲಿ ಮಾಡಿ ತರಸ್ದೆ ಮತ್ತೊಂದ್ ಬುಂಡೆ ನಾ!ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?ಖಾರ್ವಾದ್ ಚಟ್ನಿ, ಉಪ್ಪಿನ ಕಾಯಿ ಮದ್ಯೆ ಮಡಗ್ಸ್ದೆ ನಾ;ಕುಡಿತ ಕುಡಿತ ಖಾರನ್ ಕೂಡ ನೆಕ್ತ ಇದ್ದೆ ನಾ;ಎರಡು ಸೇರಿ, ನೆತ್ತಿಗ್ ಏರಿ, ತಿರುಗ್ಸ್ತು ತಲೇ ನಾ!ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?ಅರ್ದ ತುಂಬಿದ್ ಐದ್ನೆ ಬುಂಡೆ ಕೈನಾಗ್ ಮಡ್ಕೊಂಡ್ ನಾ;ಗೀರನ್ ತಿರ್ಗಿ ಎದ್ದು ನಿಂತೆ ಮನ್ಕಡ್ ಓಗೋಕ್ ನಾ,ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ!ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?-ರಮೇ
ಆಕರ್ಷಣೆ
ಸಂಜೆ ಸೂರ್ಯ ಪಡೆದನುಅಂಗಲಾಚಿ ನಿನ್ನ;ಸಿಗ್ಗಿನಿಂದ ಕೆಂಪಾದ,ಆ ಕೆನ್ನೆ ಬಣ್ಣ!ಮಲ್ಲಿಗೆ ಬಳ್ಳಿ ಕದ್ದಳು,ನೇವರಿಸಿ ನಿನ್ನ;ತೊಗಲಿನಲಿ ಅಡಗಿದ್ದ,ಮಾದಕ ಕಂಪನ್ನ!ಕೋಗಿಲೆ ತಾನು ಕಲಿತಳು,ಅನುಸರಿಸಿ ನಿನ್ನ;ಕೊರಳಿನಲಿ ಅರಳಿದ್ದ,ಮಧುರ ನಾದವನ್ನ!ಇರುಳು ತಾನು ಸೆಳೆದಳು,ಓಲೈಸಿ ನಿನ್ನ;ಕೇಶದಲಿ ಕರಗಿದ್ದ,ತೀಕ್ಷ್ಣ ಕರುಪನ್ನ!-ರಮೇ
ಮಂದಹಾಸ
ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಜುಳು ಜುಳು ನೀರಿನ ಶಬ್ದದ ಪ್ರಾಸ;
ನಿನ್ನಯ ಕೊರಳಲಿ ಶಾಶ್ವತ ವಾಸ!
ಕಿಲ ಕಿಲ ನಗುವನು ಕಲಿಯಿತು ಕೋಗಿಲೆ;
ನಿನ್ನಯ ನಗುವಿಗೆ ನಲಿಯಿತು ನೈದಿಲೆ! - ಚರಣ ೧
ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಕಾರ್ಮೋಡ ಕಲೆತಾಗ, ಮಯೂರ ನರ್ತನ;
ಕಂಗಳದು ಬೆರೆತಾಗ, ನಿನ್ನ ನಗುವಿನ ಸಿಂಚನ!
ತಂಗಾಳಿಗು ನಿನ್ನ ನಗಿಸುವ ಆಸೆ;
ಮೆಲ್ಲಗೆ ನಗುವ ಕದಿಯುವ ಆಸೆ! - ಚರಣ ೨
-ರಮೇ
ಅನ್ಯ ಭಾಷೆ
ಹಿಂದಿ ಹೇರಿಕೆ ವಿರೋಧಿಸುವ ದಿನದಂದು (ಸೆಪ್ಟೆಂಬರ್ ೧೪), ನಾನು ಎಂದೊ ಬರೆದ ಕವನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ!ತೆರೆದಿಹರು ನವ ಪುಟಗಳನ್ನು,
ಹೇರಿ ಭಾಷೆ ತಲೆಗೆ,
ಅನ್ಯ ಭಾಷೆಗಿಲ್ಲ ಎಲ್ಲೆ,ಮೂಲಭಾಷೆ ಮೂಲೆಗೆ!ಹಿರಿಯ ನರಿಯ ಕೄರ ಸಂಚಿದೆ,ಕಣ್ಕಟ್ಟಿಗೆ ಬೆರಗಾಗದಿರಿ,ನುಣುಪಾದ ಕತ್ತಿಯ ಚೂಪು ಅಂಚಿದೆ,ಮೌನದಿ ಸಮ್ಮತಿ ನೀಡದಿರಿ!ಅಭಿಮಾನ ಒಂದೆ ಇರುವ ಒಡವೆ,ಕೀಳರಿಮೆಯೊಳು ಬಳಲದಿರಿ,ಮಲತಾಯಿ ಅಳ್ವಿಕೆ ಎದುರಿಸಿ ನಡೆವೆ,ಆತ್ಮ ವಿಶ್ವಾಸ ಕಳೆಯದಿರಿ!-ರಮೇ
"ಸ್ಮಿತೆ" ಅರ್ಪಣಮಸ್ತು
ಕನ್ನಡ ಸ್ಮಿತೆಗಳನ್ನು ಜಗತ್ತಿಗೆ ಪರಿಚಯಿಸುವ ಸುಯೋಗ ಕೂಡಿಬಂದಿದೆ. ನಗೋಕ್ ಚಿಂತೆ ಯಾಕ್ ಮರಿ; *:ಹ :ಹ :ಹ* ಹಲ್ಕಿರಿತಡೆಯಕ್ಕಾಗದಿದ್ರೆ ನಿನ್ನ ನಗು*ಬಿಬಿನ* ಅಂತ ಬಿದ್ದು ಬಿದ್ದು ನಗು ಅಥವಾ*ಎಬಿನ* ಅಂತ ಎದ್ದು ಬಿದ್ದು ನಗುಹೊಟ್ಟೆನೋವಿಗೆ ಸಿದ್ಧವಿದ್ರೆ,*ನೆಮೇಬಿಬಿನ* ಅಂತ ನೆಲದಮೇಲೆ ಬಿದ್ದು ಬಿದ್ದು ನಗುಹತಾಶೆಯ ಕಿಡಿಕಾರಬೇಕೆ?*ಕಕಾಂ* ಎಂಬ ಕರ್ಮಕಾಂಡ ಸಾಕೆ?ಗೆಳೆಯನೊಡನಾಡಬೇಕೆ ಹರಟೆಯ ಪ್ರಸಂಗ?ಪ್ರಾರಂಭಿಸು *ಶಿಶಂ* ಅಂತ, ಶಿವನೇ ಶಂಭುಲಿಂಗ ಸಂಕೋಚ ಮತ್ತು ಲಜ್ಜೆಯಾ?ಚಾಚು *:ನಾ* ಎಂದು ನಾಲಿಗೆಯಾ?*:ಗುರ್ರ್* ಎಂದು ಘರ್ಜಿಸುಕೋಪತಾಪ ಪ್ರದರ್ಶಿಸುಅಚ್ಚರಿ, ಉದ್ಗಾರ, ಭಯ?*:ಓ* ಓಹ್ ಎಂದಗಲಿಸು ಬಾಯಬಿಂಬಿಸು ಪ್ರಶಂಸೆಯ ಪರಮಾನ್ನ*ಚಿಂಚಿ* ಅಂದ್ರೆ ಚಿಂದಿ ಚಿತ್ರಾನ್ನ- ಈ ಕವನವನ್ನು ಬರೆದವರು ಮನ, ಆಃದ ಕಾರಣ ಮನಾರ್ಪಣಮಸ್ತು :ಹ
ಹುಸಿ-ಹನಿ
ಹುಸಿ ಮುನಿಸಿನ ಮರೆಯಲ್ಲಿ ಒಲವಿದೆ,
ಕಚಗುಳಿ ಇಡುವಂತ ಕಲೆ ಇದೆ!
ಹುಸಿ ಕೋಪದ ನೆರಳಲ್ಲಿ ತಂಪಿದೆ,
ಮದವೇರಿಸುವಂತ ಕಂಪಿದೆ!
ಹುಸಿ ಮೌನದ ಬೆನ್ನಲ್ಲೆ ಮಂದಹಾಸವಿದೆ,
ಸ್ಪರ್ಶಿಸಲಾಗದಂತ ಸ್ನೇಹವಿದೆ!
ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ,
ಸ್ಪಂದಿಸುವಂತ ಮನಸಿದೆ!
ಹುಸಿ ಧೈರ್ಯದ ಚಾವಿನಡಿ ಮೃದು ಮೊಗ್ಗಿದೆ,
ನೀರಾಗಿಸುವಂತ ಸಿಗ್ಗಿದೆ!
-ರಮೇ
ಅಂಕ
ಇಲ್ಲಿ ಅಂಕ ಎಂಬ ಪದವನ್ನು ಪ್ರಶಂಸೆ ಎಂದು ಪರಿಗಣಿಸತಕ್ಕದ್ದು :)ಬಸಿದಾ ನೀರೂ ಆವಿಯಂಗೆ ಹಾರಿ,ಮುಂಜಾವಿನ ಶೀತಕ್ಕೆ ಹನಿಗಳಾಗಿ ಕೂಡಿ,ಒಂದೊಂದು ಮುತ್ನಂತೆ ಬಿದ್ಯಾವ ನೋಡ,ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!ಕಾರ್ಮೋಡ ಜಡಿಹಿಡಿದು ಮುಂದಕ್ಕೆ ಬಾಗಿ,ಸೊರಗಿದಾ ಭೂಮ್ಯಾಗೆ ಜೀವಕಳಿ ತುಂಬಿ,ಮೈದುಂಬಿ ನನ್ ತಾಯಿ ನಕ್ಯಾಳ ನೋಡ,ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!ಬಿಳಿ ಹಾಲ ಕೆನ್ಯಾ ಒಂದೆಡೆ ಕಲೆ ಹಾಕಿ,ಕತ್ಲಾದ ಬಾನಲ್ಲಿ ದೀಪದ ಬಳ್ಳಿ ಬೆಳಗಿ,ಸರಧಾಂಗೆ ತಾರೆಗಳ ಪೊಣ್ಸ್ಯವ ನೋಡ;ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!ಚೈತ್ರದಲಿ ಮಾಮರದಿ ಕೋಗಿಲೆಯು ಕೂಗಿ,ಮುಸ್ಸಂಜೆ ಬೆಳಕಲ್ಲಿ ಆರತಿಯು ಬೆಳಗಿ,ಜೊತೆಯಾಗಿ ಸ್ವಾಗತವ ಕೋರ್ಯಾವ ನೋಡ,ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!
-ರಮೇ