Sunday, July 16, 2006

ಅಂಕ

ಇಲ್ಲಿ ಅಂಕ ಎಂಬ ಪದವನ್ನು ಪ್ರಶಂಸೆ ಎಂದು ಪರಿಗಣಿಸತಕ್ಕದ್ದು :)

ಬಸಿದಾ ನೀರೂ ಆವಿಯಂಗೆ ಹಾರಿ,
ಮುಂಜಾವಿನ ಶೀತಕ್ಕೆ ಹನಿಗಳಾಗಿ ಕೂಡಿ,
ಒಂದೊಂದು ಮುತ್ನಂತೆ ಬಿದ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಕಾರ್ಮೋಡ ಜಡಿಹಿಡಿದು ಮುಂದಕ್ಕೆ ಬಾಗಿ,
ಸೊರಗಿದಾ ಭೂಮ್ಯಾಗೆ ಜೀವಕಳಿ ತುಂಬಿ,
ಮೈದುಂಬಿ ನನ್ ತಾಯಿ ನಕ್ಯಾಳ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಬಿಳಿ ಹಾಲ ಕೆನ್ಯಾ ಒಂದೆಡೆ ಕಲೆ ಹಾಕಿ,
ಕತ್ಲಾದ ಬಾನಲ್ಲಿ ದೀಪದ ಬಳ್ಳಿ ಬೆಳಗಿ,
ಸರಧಾಂಗೆ ತಾರೆಗಳ ಪೊಣ್ಸ್ಯವ ನೋಡ;
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಚೈತ್ರದಲಿ ಮಾಮರದಿ ಕೋಗಿಲೆಯು ಕೂಗಿ,
ಮುಸ್ಸಂಜೆ ಬೆಳಕಲ್ಲಿ ಆರತಿಯು ಬೆಳಗಿ,
ಜೊತೆಯಾಗಿ ಸ್ವಾಗತವ ಕೋರ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

-ರಮೇ

15 Comments:

Blogger Mental said...

Phantom the Devil!!? Oh great! Not all Devils are evils (Hoping).

ಅಂಕ ಪರದೆ ಎಳೆದು ಹೋಗ್ತಾಳೆ ಗೆಳತಿ
ಇದು ಕಟ್ಟಿಟ್ಟ ಬುತ್ತಿ
ನೀ ಏನಂತಿ?

6:24 AM  
Blogger Phantom said...

ಮೆಂಟಲೇಶ್ವರ,

ನನಗೆ ಅನುಭವ ವಾಗಿಲ್ಲವೈ. ಆದ ತತ್ಖ್ಷಣಾ ನಿನಗೆ ತಿಳಿಸುವೆ.

9:44 AM  
Blogger ಸುಸಂಕೃತ said...

ainAti kavanA ree BootaNNa...BAL majA baMtree yappa...
idakA nA hELoodu noorakke noor aMka kaTTiTTa butti ree!

10:49 AM  
Blogger Phantom said...

ಸೂಸಾನಪ್ಪೊ,

ಮೆಚ್ಕೊಂಡಿದ್ದಕ್ಕೆ ಧ.ವಾ. ಗಳು.
ಅಂಕ ನೀನ್ ಕೊಟ್ಟೆ, ಆದ್ರೆ ಅವಳು ಇನ್ನು ಕೊಟ್ಟೆ ಇಲ್ಲ.

11:06 AM  
Blogger Alpazna said...

ಆಹಾ...
ಚೆನ್ನಾಗಿದೆ.

11:49 AM  
Blogger Shiv said...

ರಮೇ,

ಪ್ರಾನ್ಸ್ ನಲ್ಲಿ ತುಂಬಾ ಮಳೆಯಾಗ್ತಾ ಇದೆಯಾ !
ಕಳೆದ ಎರಡು ಕಾವ್ಯಗಳು ವರ್ಷಧಾರೆಯ ವರ್ಣನೆ ಮಾಡುತ್ತಿವೆ..

ಇಂತಾ ಕಾವ್ಯ ನೀಡಿದರೆ ಯಾವ ಗೆಳತಿ ತಾನೇ ಅಂಕ ನೀಡದೆ ಹೋದಾಳು..ನಿಮ್ಮ ಕಾವ್ಯ ಸುಧೆ ಹೀಗೆ ಮಧುರವಾಗಿ ಹರಿಯುತಿರಲಿ..

PS: ನಿಮ್ಮ ಕಾವ್ಯ ಸುಧೆಯನ್ನು ನನ್ನ ಪಾತರಗಿತ್ತಿಯಲ್ಲಿ ಲಿಂಕ್ ಮಾಡಿರುವೆ..ಅಭ್ಯಂತರವಿಲ್ಲ ತಾನೇ :)

12:49 PM  
Blogger Phantom said...

ಹಿ ಹಿ ಹಿ; ಸದ್ಯಕ್ಕೆ ಮಳೆ ಇಲ್ಲ. ಬಿಸಿಲ ತಾಪ.

ಶಿವ್,

ತಮ್ಮ ಪಾತರಗಿತ್ತಿಯಲ್ಲಿ ನನ್ನ ಬ್ಲಾಗಿನ ಕೊಂಡಿಯನು ಹಾಕಿರುವುದು ಯಾವ ತೊಂದರೆಯು ಇಲ್ಲ.

ಭೂತ ಪುಳಕಿತವಾಯಿತು.

1:32 PM  
Blogger ಮನಸ್ವಿನಿ said...

This comment has been removed by a blog administrator.

8:40 PM  
Blogger ಮನಸ್ವಿನಿ said...

ಚಲೋ ಇದ್ದು.
ಸರಧಾಂಗೆನ? ಸರದಂಗೆ ಅಲ್ದ?

ಬರಿ ಅಂಕ ಸಾಲ್ದಾ ಹೆಂಗೆ?
ಇನ್ನೆಂತ ಮಾಡವ್ವು ನಿನ್ನ್ ಗೆಳತಿ...ಅದು ಬರಿಯಕಾಗಿತ್ತ ;)
ಎಂತ ಹೇಳ್ತೆ!!!!

8:41 PM  
Blogger ಅಸತ್ಯ ಅನ್ವೇಷಿ said...

ಓ ಭೂತ ರಮೆಯೇ!!!!

ಕತ್ಲಾದ ಬಾನಲ್ಲಿ ದೀಪದ ಬಳ್ಳಿ ಬೆಳಗಿದರೆ
ಅಂಕ ಕೊಡೋಕೆ ಮುಂಚೆಯೇ ಭೂತ
ಓಡಿ ಹೋಗ್ತ್ಯಾದಾ ನೋಡಿ....!!!!

9:27 PM  
Blogger Phantom said...

manaswini,

pratikiriyege da.vA.gaLu.

nan geLati, citta gaTTi mADi ille iravu :)

aMvESigaLe,

I bhUta beLakinalli ODADutte :)

11:44 PM  
Blogger ಮನ | Mana said...

ಬ್ಲಾಗರ್ ಖಾತೆ ಇಲ್ಲದವರು ಅನಿಸಿಕೆ, ಅಭಿಪ್ರಾಯ, TK, ಟಿಪ್ಪಣಿ ಏನೂ ಹಾಕಂಗಿಲ್ವೋ? :ಓ
ಹಂಗಾದ್ರೆ, ಅಂಕವೂ ಇಲ್ಲ ಅನ್ಕೊಂಡು ಅವ್ರು ಸುಮ್ನೇ ಹೋಗ್ತಾರೆ. :ಹ

ಸಿ.ಅಶ್ವಥ್ ರಾಗಸಂಯೋಜನೆಯಲ್ಲಿ, ಅವರೇ ಹಾಡಿದಂತೆ ಕಲ್ಪಿಸಿಕೊಂಡು ಓದಿದೆ, ಎರಡು ಮೂರು ಬಾರಿ. ಬಹಳ ಮಜ ಬಂತು.
ಅಂದಹಾಗೆ, "ಗೆಳತಿ"ಯಿಂದ, ಇಲ್ಲಿ ಪ್ರಶಂಸೆ (ಅಂಕ) ಬಯಸಲು ಕಾರಣ? ;)

12:48 AM  
Blogger Phantom said...

ಮನವೇ,

ಪ್ರಶಂಸ್ಸೆ ಗೆ ಧ.ವಾ.

ಪ್ರಕೃತಿ ಸೌಂದರ್ಯ, ಅಸ್ಟ್ ಚೊಲೊ ಇದ್ದು ಮಾರಾಯ. ಅದನ್ನ ನೋಡಿ, ಚೆನ್ನಗಿದೆ ಅಂತ ಪ್ರಶಂಸಿಸಿ ಹೋಗದಿರು ಗೆಳತಿ. ನಾನು ಇಲ್ಲೆ ಇರುವೆ, ನೀನು ಕುಡ ಇಲ್ಲೆ ಇರು. ಹಿ ಹಿ ಹಿ, ಚಿತ್ತ ಗಟ್ಟಿ ಮಡಿ ನನ್ ಸಂತಿ ಇರು ಹೇಳಿ ಕೆಳ್ಕೊಳ್ತ ಇದ್ದೆ.

ಭೂತ

1:17 AM  
Blogger mavinayanasa said...

ವಾಹ್ ರಮೇಶ್

ಅಂಕ ಕವನಕ್ಕೆ ನನ್ನ ಕಡೆಯಿಂದ ೧೦೦ ಕ್ಕೆ ೧೦೦ ಅಂಕಗಳು.

ಬಹಳ ಚೆನ್ನಾಗಿ ಬರೆದಿದ್ದೀರಿ.

4:53 AM  
Blogger Sindhu said...

:} Ramesh avre, tumba chennagide!
Nice blog...

http://sindhu.eponym.com/blog

5:02 PM  

Post a Comment

<< Home