Tuesday, June 13, 2006

ಬಾ ಬೆಳಕೆ

ಬಾ ಬೆಳಕೆ ಬಾ ಬೆಳಕೆ ಮರಳಿ ಎನ್ನ ಬಳಿಗೆ,
ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತೆ,
ದು:ಖ ದೂಡುವ ನೆವದಿ, ಬೆಳಕೆ ಬಾ ಬಳಿಗೆ!

ಮುಂಜಾನೆ ಮೂಡಣದಿ ನಿನ್ನ ಬೆಳಕೇ ಚೆಲ್ಲಲಿ,
ಅದನ ನೋಡುತ ತಾವರೆ ತನ್ನ ಮೈಯ್ಯ ಮರೆಯಲಿ,
ಪದ್ಮ ಪರಿಮೆಯೊಳಿರುವ ಹೂಗಳೆದೆ ಅಂದ,
ಹಿಗ್ಗಿಸುವ ಅಮೃತವ ಬೆಳಕೆ ತಾ ಬಳಿಗೆ!

ಮುಸುಕು ಕವಿದ ಕಂಗಳಿಗೆ ನಿನ್ನ ಬೆಳಕೆ ಕಾಂತಿಯು,
ಮಬ್ಬು ಹರಿದು, ಜ್ಞಾ ನ ಚಿಗುರಿ, ದೂರವಾಗಲಿ ಚಿಂತೆಯು,
ಮನದಲ್ಲಿ ಆಶಯದ ಮಳೆಬಿಲ್ಲು ಮೂಡಿದೆ,
ವರ್ಣ ವೃದ್ಧಿಸುವ ಕುಂಚ, ಬೆಳಕೆ ತಾ ಬಳಿಗೆ!

-ರಮೇ

11 Comments:

Blogger ಮನ | Mana said...

ಮುಸುಕು ಕವಿದ ಕಂಗಳಿಗೆ ನಿನ್ನ ಬೆಳಕೆ ಕಾಂತಿಯು,
ಮಬ್ಬು ಹರಿದು, ಜ್ಞಾ ನ ಚಿಗುರಿ, ದೂರವಾಗಲಿ ಚಿಂತೆಯು


ಕೇಳಲು, ಓದಲು ಬಹಳ ಇಂಪಾದ ಅನುಭವವನ್ನೀಯುವಂತಿವೆ ಈ ಸಾಲುಗಳು.
ಈ ಕವನ ಓದಿ, 'ಕರುಣಾಳು ಬಾ ಬೆಳಕೆ' ನೆನಪಾಯಿತು. :-)

ಕವನಗಳ ಸುಧೆ ನಿರಂತರವಾಗಿ ಮೂಡಿಬರುತ್ತಿರಲಿ ಎಂದು ಹಾರೈಸುವೆ.

ಶುಭವಾಗಲಿ,
ಮನ

2:36 PM  
Blogger Phantom said...

ಮನ, ನಿನ್ನ ಪ್ರೇರಣೆ ಭರಿತ ಮಾತುಗಳಿಗೆ ದ.ವಾ.ಗಳು.
ಹೇಳ್ಬೇಕು ಅಂದ್ರೆ, ಅಡಿಗರ, ಇಂದು ಕೆಂದಾವರೆಯ ದಳ ದಳಿಸಿ ದಾರಿಯಲಿ, ಕವನ ಓದಿ, ಅದರಿಂದ ಪ್ರೇರಿತನಾದೆ. ನಂತರ, ಆಶಾವದವನ್ನು ವ್ಯಕ್ತಪಡಿಸುವಂತಹ ಒಂದು ಕವನ ಬರೆ ಬೇಕೆಂದೆನಿಸಿ, ಬೆರೆದೆ.

11:43 AM  
Blogger Susheel Sandeep said...

"ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತೆ,
ದು:ಖ ದೂಡುವ ನೆವದಿ, ಬೆಳಕೆ ಬಾ ಬಳಿಗೆ!"

ಸಕ್ಕತ್ inspirational ಸಾಲುಗಳು!
ಕಾವ್ಯ-ಸುಧೆಯ ಹರಿವಿಗಾಗಿ ಕಾತರದಿಂದ ಕಾಯುತ್ತಿದ್ದೇನೆ...
ಹರಿ-ಹರಿದು ಬರಲಿ ಕಾವ್ಯ ಹೊಮ್ಮಿಸುವ ನೆವದಿ...

1:11 AM  
Blogger Anveshi said...

ಬ್ಲಾಗುಗಳ ಕಾರ್ಮೋಡಗಳಲ್ಲಿ
ಬೆಳಕಾಗಿ ಹರಿಯಲೀ
ಕಾವ್ಯಸುಧೆ

1:39 AM  
Blogger bhadra said...

ರಮೇಶ ಬಹಳ ಬಹಳ ಚೆನ್ನಾಗಿ ಮೂಡಿ ಬಂದಿದೆ ಕಾವ್ಯಸುಧೆ.
ಈ ಪದಗಳ ಜೋಡಣೆ ನನಗೆ ತುಂಬಾ ಇಷ್ಟವಾಯಿತು.

ಮುಸುಕು ಕವಿದ ಕಂಗಳಿಗೆ ನಿನ್ನ ಬೆಳಕೆ ಕಾಂತಿಯು,
ಮಬ್ಬು ಹರಿದು, ಜ್ಞಾ ನ ಚಿಗುರಿ, ದೂರವಾಗಲಿ ಚಿಂತೆಯು

ಇನ್ನು ನಿರಂತರ ಹರಿಯಲಿ ನಿಮ್ಮ ಕಾವ್ಯಧಾರೆ.

ಒಳ್ಳೆಯದಾಗಲಿ.

8:05 AM  
Blogger ಮನಸ್ವಿನಿ said...

Ramesh,
Tumbaa chennagide. Nimma kaavyasudeyinda sudaapaanavaayitu. Sakaaraatmakavaagi, spoorthi chilumeyantide.

4:55 AM  
Blogger Phantom said...

ಸುಸಂಕೃತ, ತವಿಶ್ರೀ, ಅಸತ್ಯಾನ್ವೇಶಿ, ಸುರೇಖ, ನಿಮ್ಮ ಉತ್ತೆಜನಕಾರಿ ವಾಕ್ಯಗಳಿಗೆ ನನ್ನ ವಂದನೆಗಳು.

1:40 PM  
Blogger Deep said...

ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತೆ,
ದು:ಖ ದೂಡುವ ನೆವದಿ, ಬೆಳಕೆ ಬಾ ಬಳಿಗೆ!

Entha artha ..tumibiddera idaralli.. wah..
"ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತ"..

Kshanikavadro.. karmoodagala madhya kolminchu amogha kushiyannu tarutte.. hageye...

"ದು:ಖ ದೂಡುವ ನೆವದಿ".... Dukha dooduva nepadindaladaroo... ba..

Wah wah.. wah..

2:57 AM  
Blogger Phantom said...

ದೀಪ್,

ಧ.ವಾ. ನಿಮ್ಮ ಪ್ರತಿಕ್ರಿಯೆಗೆ.

ಒಂದು ಆಶವಾದದ ಬಿಂಬವಷ್ಟೆ :)

4:29 AM  
Blogger Sandeepa said...

ತುಂಬಾ ಚೆನ್ನಾಗಿದೆ.

8:29 AM  
Blogger ಡಾ. ಎಂ ಜೆ ಸುಬ್ರಮಣ್ಯಂ said...

ಕವನ ತುಂಬಾ ಚೆನ್ನಾಗಿದೆ. ಕವನ ಬರೆಯುವುದನ್ನು ಮುಂದುವರಿಸಿ. ಧನ್ಯವಾದಗಳು. ಡಾ. ಎಂ ಜೆ ಸುಬ್ರಮಣ್ಯಂ

11:19 AM  

Post a Comment

<< Home