Thursday, August 10, 2006

ಹುಸಿ-ಹನಿ

ಹುಸಿ ಮುನಿಸಿನ ಮರೆಯಲ್ಲಿ ಒಲವಿದೆ,
ಕಚಗುಳಿ ಇಡುವಂತ ಕಲೆ ಇದೆ!

ಹುಸಿ ಕೋಪದ ನೆರಳಲ್ಲಿ ತಂಪಿದೆ,
ಮದವೇರಿಸುವಂತ ಕಂಪಿದೆ!

ಹುಸಿ ಮೌನದ ಬೆನ್ನಲ್ಲೆ ಮಂದಹಾಸವಿದೆ,
ಸ್ಪರ್ಶಿಸಲಾಗದಂತ ಸ್ನೇಹವಿದೆ!

ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ,
ಸ್ಪಂದಿಸುವಂತ ಮನಸಿದೆ!

ಹುಸಿ ಧೈರ್ಯದ ಚಾವಿನಡಿ ಮೃದು ಮೊಗ್ಗಿದೆ,
ನೀರಾಗಿಸುವಂತ ಸಿಗ್ಗಿದೆ!

-ರಮೇ

15 Comments:

Blogger ಮನಸ್ವಿನಿ said...

ಚಲೊ ಇದ್ದು. ಮೊದ್ಲನೆಯ ೨ ಸಾಲು ರಾಶಿ ಚಲೊ ಇದ್ದು.

5:53 AM  
Blogger Phantom said...

ಧ.ವಾ. ಸುರೇಖ. ನೀನು ಒಂದ್ ಬರಿಯ.

6:15 AM  
Blogger Jagali bhaagavata said...

ಭೂತರಾಯರೆ, ಅದ್-ಭೂತವಾಗಿದೆ. ಸರಸ ವಿರಸವಿಲ್ಲದಿರೆ ಜೀವನ ನೀರಸವಲ್ಲವೆ?

ಮೊದಲು ಅವಳೆ ಅಂದಿರಿ, ನಂತರ ಮಳೆ ಬಂತು...ಮತ್ತೆ ಅಂಕ ನೀಡಿದಿರಿ....ಈಗ ಹುಸಿಗೋಪ....ತೀರ ಗತಿಬದ್ಧವಾಗಿದೆ... ಯಾಕೊ ನಿಮ್ಮ ಸ್ವಾನುಭವದ ಸಾಲುಗಳಿಂತೆವೆಯಲ್ಲ?

ನಿಮ್ಮ ಕಾವ್ಯಕನ್ನಿಕೆ ಈಗ ಪ್ರಬುದ್ಧಳಾಗಿದ್ದಾಳೆ ಅನ್ನಿಸುತ್ತೆ. ಮುಂದಿನ ಸಂಚಿಕೆಯಲ್ಲಿ ಏನಿರಬಹುದು ಎನ್ನುವ ಕಾವ್ಯಕುತೂಹಲ ನನಗೆ. ಮಿಲನ ಮಹೋತ್ಸವವೋ ಇಲ್ಲಾ ಮಗುವಿನ ಕಿಲಕಿಲ ನಗುವೋ?

8:05 PM  
Blogger ಮನ | Mana said...

ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ,
ಸ್ಪಂದಿಸುವಂತ ಮನಸಿದೆ!


*ಚಿಂಚಿ! ಸಕ್ಕತ್ ಇಷ್ಟ ಆತು ಇವೆರಡು ಸಾಲುಗಳು.

ಅಂದಹಾಗೆ ಹುಸಿ ಮುನಿಸಿಗೂ, ಹುಸಿ ಕೋಪಕ್ಕೂ, ಎಂತದು ವ್ಯತ್ಯಾಸ? :ಯೋ

8:27 PM  
Blogger bhadra said...

ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ,
ಸ್ಪಂದಿಸುವಂತ ಮನಸಿದೆ!

ಸೂಪರ್ ಸಾಲುಗಳು. ಭೂತರಾಯರೇ ನಮೋ ನಮ:

ನಿಧಾನಕ್ಕೆ ವಾರಕ್ಕೊಂದು ಕವನ ಬರೆದರೂ ಪರವಾಗಿಲ್ಲ, ಸಾರಯುತವಾದ ಕವನವಿದ್ರೆ ಸಾಕು. ಸೂಪರ್ ರಮೇಶ ಸೂಪರ್ ಕವನ.

1:31 AM  
Blogger Shiv said...

ಹುಸಿ ಹೆಸರಿನ ಮರೆಯಲ್ಲಿ ರಮೇ ಇದ್ದಾನೆ,
ಕಚಗುಳಿ ಇಡುವಂತ ಕವನ ನೀಡ್ತಾನೆ!

ಹಿಂಗೆ ಸಾಗಲಿ ನಿಮ್ಮ ಮಳೆ,ಅಂಕ,ಹುಸಿ,ಹನಿಗಳ ಜೊತೆ ಸರಸ..

12:26 AM  
Blogger Phantom said...

ಜಗಲಿ ಭಾಗವತರೇ,

ನನ್ನ ಜಗಲಿಗು ತಾವುಗಳು ಬಂದು ಆಸೀನರಗಿದ್ದು ಸಂತೋಷವಾಯಿತು. ಸ್ವಾನುಭವ ಅಲ್ಲ(ಸ್ವಗತ- ಇದ್ದಿದ್ದರೆ ಇನ್ನು ಚೆನ್ನಗಿಗಿ ಬರ್ತಿತ್ತೇನೊ). ಮಂದೆ ಏನು ಎಂಬ ಪ್ರಷ್ನೆಗೇ, ಉತ್ತರ ನನ್ನಲ್ಲಿಯು ಇಲ್ಲ :(

ಆದರೆ, ನನ್ನ ಕಲ್ಪನಾ ಲಹರಿ, ಕೈ ಕೊಡದಿದ್ದರೆ, ಬರುವುದು ಖಚಿತ :)


ಧ.ವಾ.ಗಳು ಸಿಂಧು.

ಭೂತ

2:27 AM  
Blogger Phantom said...

ಮನವೇ,

ನಿನ್ನ ಪ್ರತಿಕ್ರಿಯೆಗೆ ವಂದನೆಗಳು. ಕೋಪಕ್ಕು, ಮುನಿಸಿಗು ವ್ಯತ್ಯಸವೇನು ಇಲ್ಲ :)

ಭೂತ

2:30 AM  
Blogger Phantom said...

ತವಿಶ್ರೀ,

ನಿಮ ಉತ್ತೇಜನಕ್ಕೆ ವಂದನೆಗಳು. ನಿಮ್ಮ ಇಚ್ಚೆಯಂತೆ ಬರೆಯುವೆ.

ಭೂತ

2:32 AM  
Blogger Phantom said...

ಶಿವ್,

ನೀವು ಬರಿತೀರ ಕವನಗಳನ್ನ. ಬರೆಯಿರಿ, ಚೆನ್ನಗಿದೆ ಓದಲು. ನೆತ್ ಕಿರಿಕ್ ನಿಂದಾಗಿ, ಈ ಕಡೆ ಬರಲು ಆಗ್ತ ಇಲ್ಲ.
ನಿಮ್ಮ ಪ್ರತಿಕ್ರಿಯೆಗೆ ಧ.ವಾ. ಗಳು.

ಭೂತ

2:33 AM  
Blogger MD said...

ಫ಼್ಯಾಂಟಮ್ ಸ್ವಾಮಿಗಳೆ (!?),
ಎಲ್ಲವೂ ಹುಸಿ ಹುಸಿಯಾಗಿದ್ರಿಂದ್ಲೇನೆ ಬಿಸಿ ಬಿಸಿ ಮಜ಼ಾ..ಏನಂತೀರಿ?
ಆದ್ರೆ ನಿಮ್ಮ ಕಾವ್ಯಗಳಲ್ಲಿ ಒಬ್ಬ ನಿಜವಾದ ಕವಿ ಇದ್ದಾನಲ್ಲಾ ಅವ್ನು ಹುಸಿಯಲ್ಲ.
ನಿಮ್ಮ ಮುಂದಿನ ಕಾವ್ಯಸುಧೆಗೆ ಬಾಯಾರಿರುವೆ.

2:25 PM  
Blogger Deep said...

Ella vairdhya galannu channagi bimbisiddeera..

Heegeye kavya sudhe haridu barali.

Dhanyavadagalu

3:10 AM  
Blogger ShaK said...

Wow. I never knew you are a poet, eh? Nice work here mate. Chennagiwe ella kavanagaLu.

7:21 AM  
Blogger Anveshi said...

ಭೂರಮೆಯೇ,
ಭೂತದ ಬಾಯಲ್ಲಿ ಅದ್ಭೂತ ಕವನಗಳು....

ನಲಿವಿನ ಹಿಂದೆಯೂ ನೋವಿದೆ ಅಂತ ಬಿಟ್ಟಿದ್ದೀರಲ್ಲಾ?

8:51 AM  
Blogger ಜಯಂತ ಬಾಬು said...

ಈ ತರ ಹುಸಿ ಹುಸಿ ಹಿಂದೆ ಭಾವಗಳು...ಪ್ರೀತಿ ಬಲವಾಗಿರುವೆಡೆ ...ಹೆಚ್ಚೆಚ್ಚು ತೋರುತ್ತವೆ ಅನಿಸುತ್ತೆ ...ತುಂಬ ಚೆನ್ನಾಗಿದೆ

12:41 PM  

Post a Comment

<< Home