Thursday, November 09, 2006

ಆಕರ್ಷಣೆ

ಸಂಜೆ ಸೂರ್ಯ ಪಡೆದನು
ಅಂಗಲಾಚಿ ನಿನ್ನ;
ಸಿಗ್ಗಿನಿಂದ ಕೆಂಪಾದ,
ಆ ಕೆನ್ನೆ ಬಣ್ಣ!

ಮಲ್ಲಿಗೆ ಬಳ್ಳಿ ಕದ್ದಳು,
ನೇವರಿಸಿ ನಿನ್ನ;
ತೊಗಲಿನಲಿ ಅಡಗಿದ್ದ,
ಮಾದಕ ಕಂಪನ್ನ!

ಕೋಗಿಲೆ ತಾನು ಕಲಿತಳು,
ಅನುಸರಿಸಿ ನಿನ್ನ;
ಕೊರಳಿನಲಿ ಅರಳಿದ್ದ,
ಮಧುರ ನಾದವನ್ನ!

ಇರುಳು ತಾನು ಸೆಳೆದಳು,
ಓಲೈಸಿ ನಿನ್ನ;
ಕೇಶದಲಿ ಕರಗಿದ್ದ,
ತೀಕ್ಷ್ಣ ಕರುಪನ್ನ!

-ರಮೇ

20 Comments:

Blogger MD said...

ಭೂತ
ಈ ಕವಿತೆಯ ಹಿಂದಿರುವ ಮನಮೋಹಿನಿ ಯಾರು ?

ನಿಮ್ಮ ಕವನಗಳಿಗೆ ನಿಮ್ಮದೇ ಆದ ಭೌ[ಭೂ]ತಿಕತೆ ಇದೆ.
ಬರಿಯಿರಿ ಬರಿಸಿರಿ ಲೈಫ಼್ ನಿಮ್ಮದಾಗಿಸಿರಿ

5:56 AM  
Blogger Phantom said...

md,

ನನಗೆ ಗೊತ್ತಿರೋದು ಬರಿ ಮನ, ಮೋಹಿನಿಯ ಸಾಕ್ಷಾತ್ಕಾರ ಇನ್ನು ಆಗಿಲ್ಲ :(

ಈ ಕವನಗಳು ಬರಿಯ ಕಲ್ಪನೆ ಮಾತ್ರ, ಭಾವನೆಯಾದಾಗ, ಖಂಡಿತ ಹೇಳುವೆ.

ನಿಮ್ಮ ಪ್ರತಿಕ್ರಿಯೆಗೆ ಧ.ವಾ.

ಭೂತ

7:54 AM  
Blogger ಮನ | Mana said...

*ಚಿಂಚಿ*
*ಜೈ*


"ಕೊರಳಿನಲಿ ಅರಳಿದ್ದ" ಪ್ರಾಸ ಬೊಂಬಾಟ್!!
ಕವನದಲ್ಲಿ ಪದಪ್ರಯೋಗ ಬಹಳ ಸುಂದರವಾಗಿ ಮೂಡಿಬಂದಿದೆ.

===

ರಮೇ ತಾನು ಪಡೆದನು
ರಮಿಸುತಾ ನಿನ್ನ;
ಉಸಿರುಸಿರಲಿ ಹುದುಗಿದ್ದ
ಸ್ಫೂರ್ತಿಯ ಪರಮಾನ್ನ

- ಮನ [ಮನ+ಮೋಹಿನಿ ಸಾಕ್ಷಾತ್ಕಾರ? :ಯೋ ]

9:45 PM  
Blogger Phantom said...

ಮನವೇ,

ನಿನಗೆ ಯೋ ಬೇಡವೈ ;)

ಧ.ವಾ.

ಇಂತಿ
ಭೂತ

1:39 PM  
Blogger Phantom said...

ತವಿಶ್ರೀ,

ನಿಮ್ಮ ಪ್ರತಿಕ್ರಿಯೆ ಗೆ ಧ.ವಾ.

ಇಲ್ಲ ಇಲ್ಲ, ಎಂದರು ಅನುಮಾನ ಹೋಗಿಲ್ಲ. ನನಗೆ, ಇನ್ನು ಆ ಮೋಹಿನಿ ಸಿಕ್ಕಿಲ್ಲ :(

ಸಿಕ್ಕಿದೊಡನೆ, ಬ್ಲಾಗ್ ನಲ್ಲಿ ಕಲ್ಪನೆ ಅಲ್ಲ, ಇದು, ಭಾವನೆ ಎಂದು, ಹಾಕುವೆ.

ಇಂತಿ
ಭೂತ

1:41 PM  
Blogger Shiv said...

ಅಮೋಘವಾಗಿದೆ ರಮೇ !!
ಮೋಹಿನಿ ಸಾಕ್ಷಾತ್ಕಾರ ಇನ್ನೂ ಆಗಿಲ್ಲ ಅನ್ತೀರಾ..ಯಾಕೋ ನಿಜ ಅನಿಸ್ತಾ ಇಲ್ಲ :)

ಇರಲಿ..ಒಂದಂತು ನಿಜ..ನೀವು ಹೀಗೆ ಕವನ ಬರೀತಾ ಇದ್ದರೆ ಬಹು ಬೇಗನೆ ಒಬ್ಬ ಮೋಹಿನಿ ನಿಮ್ಮ ಮುಂದೆ ಪ್ರತ್ಯಕ್ಷ ಆದರೂ ಆಗಬಹುದು..

ಸಾಗಲಿ...ಸುಧೆಯ ಯಾನ

10:37 PM  
Blogger ಮನಸ್ವಿನಿ said...

ಸಕತ್ ಹಾಡು....
ನನ್ನ ಪ್ರಶ್ನೆಗೆ ನಿನ್ನದು ಉತ್ತರ ಅದೇ ಇರುತ್ತೆ!! :)
ಯಾರು ಸ್ಪೂರ್ತಿ?

3:55 PM  
Blogger Phantom said...

ಶಿವಪ್ಪ,

ನಿಮ್ ದಯೆ ಇಂದ ಹಂಗೆ ಆಗ್ಲಿ.

ಧ.ವಾ. ನಿಮ್ಮ ಪ್ರತಿಕ್ರಿಯೆಗೆ.

ಇಂತಿ
ಭೂತ

6:02 AM  
Blogger Phantom said...

ಮನಸ್ವಿನಿಯೇ,

ಇನ್ನು ಸಿಕ್ಕಿಲ್ಲೆ. ಒಂದೆ ಒಂದ್ ಸರ್ತಿಯಾರು, ನನ್ ಬಗ್ಗೆ ಎಂತದಾರು ಕೇಳಿದಿದ್ದಾ :(

ಎಂತ, ನನಗೆ ಸುವರ್ಣ ಕಿರಣಗಳ ಸಾಕ್ಷಾತಾರ ಎಂದು ಆಗುವುದೋ :(

ಎಲ್ಲ ನಿನ್ನ ಕೃಪೆ.

ಇಂತಿ
ದುಖಿತ ಭೂತ

6:06 AM  
Blogger Anveshi said...

ಭೂತವೇ,

ದುಃಖಿತರಾಗದಿರಿ.

ಕೆಂಪು ಕೆನ್ನೆ ಬಣ್ಣದವರು ಶೀಘ್ರವೇ ಬರುತ್ತಾರೆ ಅಂತ ಭವಿಷ್ಯ ನುಡಿಯುವೆ. (ನಂಬಿದ್ರೆ ಮಾತ್ರ!)

6:18 AM  
Blogger sritri said...

ಭೂತದ ಮನೆಗೆ ಬಂದೆ
ಮನಸಾರೆ ಸವಿದೆ
ನಾ ಕಾವ್ಯ ಸುಧೆ :)

3:38 PM  
Blogger Susheel Sandeep said...

bhootaNNa:
yAkO baMdirlilla kappa icchorike baal disagaliMda eega baMduddeya ella oMdE kita ODbuTTi...

ainAtiyAgave kana ee padagOLu....
ಇರುಳು ತಾನು ಸೆಳೆದಳು,
ಓಲೈಸಿ ನಿನ್ನ;
ಕೇಶದಲಿ ಕರಗಿದ್ದ,
ತೀಕ್ಷ್ಣ ಕರುಪನ್ನ!

Adroo yAkO iDee padyakke A togalu annO pada sari barnilla kappa...nee A padava upyOgsvAga En yOsane mADi AkiddO nA kANi..

12:52 AM  
Blogger Phantom said...

ಅನ್ವೇಶಿಗಳೆ,

ನಿಮ್ಮ ಮಾತು ನಿಜವಾಗಲು. ಆದ್ರೆ, ಕೆಂಪಗಿರೋಳು ಅಂದ್ರೆ, ಯಾಕೊ ನಿಮ್ಮ ಅರ್ಥ, ನಿಮ್ಮ ಚಿತ್ರ್ ನೆನಪಿಸುತ್ತೆ
:(

ಇಮ್ತಿ
ಭೂತ

7:24 AM  
Blogger Phantom said...

ಶ್ರೀತ್ರಿ ಯವರೇ,

ಭೂತದಂಗಳಕ್ಕೆ ಸ್ವಾಗತ.

ನಿಮ್ಮ ಮೆಚ್ಚುಗೆಗೆ ಧ.ವಾ.

ಇಂತಿ
ಭೂತ

7:27 AM  
Blogger Phantom said...

ಸೂಸಾನು,

ಬಾರ್ಲ. ಏಟೋ ದಿನ ಆಗಿತ್ತು, ನೀನು ಸಿಕ್ಕಿ.

ನಿನ್ಗೆ ಇಟ್ವಾಗ್ಲಿಲ್ವಾ? ಅದರ ಬದಲು ಯಾವ್ ಪದ ಬಳಿಸ್ಬೊಹುದ್ಲಾ?

ಇಂತಿ
ಭೂತ

7:29 AM  
Blogger Susheel Sandeep said...

ಮಲ್ಲಿಗೆ ಬಳ್ಳಿ ಕದ್ದಳು,
ನೇವರಿಸಿ ನಿನ್ನ;
ತೊಗಲಿನಲಿ ಅಡಗಿದ್ದ,
ಮಾದಕ ಕಂಪನ್ನ!

illi 'togalu' badalige 'tvace' annabahudEnO!

nanage tiLida maTTige twacegoo togaligoo irO vyatyAsa skin goo leathergoo irOdu! :)

3:09 AM  
Blogger MD said...

kshamisi..
nimage comment bareyo badloo naanu kelavu links kodta iddeni..
plz visit w/o fail

http://www.chitra-kaavya.blogspot.com

http://kuncha-prapancha.blogspot.com

http://mysore-engineer.blogspot.com

http://pramodgreetings.blogspot.com

8:03 AM  
Blogger Sushrutha Dodderi said...

ಕಾವ್ಯಸುಧೆ ನಿಜಕ್ಕೂ ರುಚಿಯಾಗಿದೆ. ಸುಧೆ ಬದುಕುವ ಖುಷಿಯನ್ನು ಕಿಂಚಿತ್ತಾದರೂ ಹೆಚ್ಚಿಸುವುದರಲ್ಲಿ ನೋ ಡೌಟು. ಬರೀತಾ ಇರಿ..

3:20 AM  
Blogger Jagali bhaagavata said...

No Kavya and No Sudha for quite sometime. What happened?

1:53 PM  
Blogger Jagali bhaagavata said...

ಭೂತಪ್ಪನ್,

ನಿಮ್ಮ ಕಾವ್ಯಸುಧೆ ಯಾಕೆ ಬತ್ತಿಹೋಗಿದೆ? ಮೋಹಿನಿಯ ಸಾಕ್ಷಾತ್ಕಾರ ಆಯ್ತೋ ಹೇಗೆ?

ಜಗಲಿ ಭಾಗವತ

8:53 AM  

Post a Comment

<< Home