ಮಂದಹಾಸ
ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಜುಳು ಜುಳು ನೀರಿನ ಶಬ್ದದ ಪ್ರಾಸ;
ನಿನ್ನಯ ಕೊರಳಲಿ ಶಾಶ್ವತ ವಾಸ!
ಕಿಲ ಕಿಲ ನಗುವನು ಕಲಿಯಿತು ಕೋಗಿಲೆ;
ನಿನ್ನಯ ನಗುವಿಗೆ ನಲಿಯಿತು ನೈದಿಲೆ! - ಚರಣ ೧
ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಕಾರ್ಮೋಡ ಕಲೆತಾಗ, ಮಯೂರ ನರ್ತನ;
ಕಂಗಳದು ಬೆರೆತಾಗ, ನಿನ್ನ ನಗುವಿನ ಸಿಂಚನ!
ತಂಗಾಳಿಗು ನಿನ್ನ ನಗಿಸುವ ಆಸೆ;
ಮೆಲ್ಲಗೆ ನಗುವ ಕದಿಯುವ ಆಸೆ! - ಚರಣ ೨
-ರಮೇ
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಜುಳು ಜುಳು ನೀರಿನ ಶಬ್ದದ ಪ್ರಾಸ;
ನಿನ್ನಯ ಕೊರಳಲಿ ಶಾಶ್ವತ ವಾಸ!
ಕಿಲ ಕಿಲ ನಗುವನು ಕಲಿಯಿತು ಕೋಗಿಲೆ;
ನಿನ್ನಯ ನಗುವಿಗೆ ನಲಿಯಿತು ನೈದಿಲೆ! - ಚರಣ ೧
ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ
ಕಾರ್ಮೋಡ ಕಲೆತಾಗ, ಮಯೂರ ನರ್ತನ;
ಕಂಗಳದು ಬೆರೆತಾಗ, ನಿನ್ನ ನಗುವಿನ ಸಿಂಚನ!
ತಂಗಾಳಿಗು ನಿನ್ನ ನಗಿಸುವ ಆಸೆ;
ಮೆಲ್ಲಗೆ ನಗುವ ಕದಿಯುವ ಆಸೆ! - ಚರಣ ೨
-ರಮೇ
12 Comments:
ಬಹಳ ಚಂದದ ಕವನ ರಮೇಶ. ಶಶ್ವತವನ್ನು ಶಾಶ್ವತ ಮತ್ತು ಹಸನದವನ್ನು ಹಸನಾದ ಎಂದು ಸರಿ ಪಡಿಸಿ.
ಇನ್ನೂ ಹೆಚ್ಚು ಹೆಚ್ಚು ಕವನಗಳೊಂದಿಗೆ ಕೆಲವು ಲೇಖನಗಳೂ ಮೂಡಿಸಿರಿ.
ಒಳ್ಳೆಯದಾಗಲಿ
ನೀವು ಹೇಳಿದ ಹಾಘೆ ಶಾಶ್ವತ ಮಾಡಿದೆ :)
ಹಾಗೆಯೆ ಹಸನದ ವನ್ನು ನಗುವಿನ ಮಾಡಿದೆ(ಅದೇ ಸರಿ ಎನ್ನಿಸಿತು, ಏಕೊ)
ಪ್ರತಿಕ್ರಿಯೆ ಗೆ ಧ.ವಾ.
ತುಂಬಾ ಚೆನ್ನಾಗಿದೆ..ಯಾರಿಗೆ ಅರ್ಪಣೆ? ;)
ಇನ್ನು ಯಾರು ಸಿಕ್ಕಿಲ್ಲೆ :(. ಸಿಕ್ಕಿದ್ ಕೂಡ್ಲೆ ಅರ್ಪಿಸ್ತಿ ಅಕ್ಕಾ :ಹ
ರಮೇ,
As always ತುಂಬಾ ಸೊಗಸಾಗಿ ಬಂದಿದೆ ಕಾವ್ಯ ಸುಧೆ..
ಯಾಕೋ ನನಗೆ ಅನಿಸ್ತಾ ಇದೆ..ಈ ಕವನದ ಹಿಂದೆ ಯಾವುದೋ ಒಂದು ರಮೇಶನ ಮನ ದೋಚಿದ ಹೃದಯದ ಕೈವಾಡವಿದೆ...
ಹೀಗೆ ನಡೆಯಲಿ ನಗುವಿನ ನೌಕೆ...
ತುಂಬಾ ಚೆನ್ನಾಗಿ ಮುಡಿಬಂದಿದೆ
ಭುತಕ್ಕೂ ಕವನ ಬರೆಯಲು ಬರುತ್ತಾ?
-ಪಬ್
ಶಿವಪ್ಪ,
ಧ.ವಾ.
ಹೃದಯ ಸದ್ಯ ಇನ್ನು ನನ್ನ ಬಳಿಯೇ ಇದೆ. ಇದು ನನ್ನ ಕಲ್ಪನೆ. ನನ್ನ ಭಾವನೆಯಾದಾಗ ಖಂಡಿತ ಹೇಳ್ತಿನಿ,
"ಕಾವ್ಯಸುಧೆ, ಇದು ಬರಿ ಕಲ್ಪನೆಯಲ್ಲ, ಭಾವ್ನೆ ಕೂಡ" ಅಂತ.
ಇಂತಿ
ಭೂತ
ಎನಿಗ್ಮ ರವರೆ,
ಕವನ ಮೆಚ್ಚಿದ್ದಕ್ಕಗಿ ಧ.ವಾ.
ಭೂತ
ಎಣ್ಣೆ ಕುಡಿಸುವಾತರೇ,
ಇ ಭೂತ ಕವನವನ್ನು ಬರೆಯುತ್ತೆ :)
ಭೂತ
ಜುಳು ಜುಳು ನೀರಿನ ಶಬ್ದದ ಪ್ರಾಸ;
ನಿನ್ನಯ ಕೊರಳಲಿ ಶಾಶ್ವತ ವಾಸ!
ಕಿಲ ಕಿಲ ನಗುವನು ಕಲಿಯಿತು ಕೋಗಿಲೆ;
ನಿನ್ನಯ ನಗುವಿಗೆ ನಲಿಯಿತು ನೈದಿಲೆ!
abbabbA! - bhaavanegaLa parAkAShTe!
soopar guru...nee yAkO wholesale aagi kavanagaLanna geeci kELidavrigella "innu yAroo sikkilla" annOd nODidre serious aagi doubt bartaa ide!
Nieevu bareva reethi tumba tumba muddaagide..padagala jodane adbhutavaagide…
Nanna putaani blog
www.navilagari.wordpress.com
idakke nimma blaag rolnalli swalpa jaaga kodi:)
Nimma somu
Post a Comment
<< Home