Thursday, September 07, 2006

"ಸ್ಮಿತೆ" ಅರ್ಪಣಮಸ್ತು

ಕನ್ನಡ ಸ್ಮಿತೆಗಳನ್ನು ಜಗತ್ತಿಗೆ ಪರಿಚಯಿಸುವ ಸುಯೋಗ ಕೂಡಿಬಂದಿದೆ.

ನಗೋಕ್ ಚಿಂತೆ ಯಾಕ್ ಮರಿ;
*:ಹ :ಹ :ಹ* ಹಲ್ಕಿರಿ

ತಡೆಯಕ್ಕಾಗದಿದ್ರೆ ನಿನ್ನ ನಗು
*ಬಿಬಿನ* ಅಂತ ಬಿದ್ದು ಬಿದ್ದು ನಗು
ಅಥವಾ
*ಎಬಿನ* ಅಂತ ಎದ್ದು ಬಿದ್ದು ನಗು

ಹೊಟ್ಟೆನೋವಿಗೆ ಸಿದ್ಧವಿದ್ರೆ,
*ನೆಮೇಬಿಬಿನ* ಅಂತ
ನೆಲದಮೇಲೆ ಬಿದ್ದು ಬಿದ್ದು ನಗು

ಹತಾಶೆಯ ಕಿಡಿಕಾರಬೇಕೆ?
*ಕಕಾಂ* ಎಂಬ ಕರ್ಮಕಾಂಡ ಸಾಕೆ?

ಗೆಳೆಯನೊಡನಾಡಬೇಕೆ ಹರಟೆಯ ಪ್ರಸಂಗ?
ಪ್ರಾರಂಭಿಸು *ಶಿಶಂ* ಅಂತ, ಶಿವನೇ ಶಂಭುಲಿಂಗ

ಸಂಕೋಚ ಮತ್ತು ಲಜ್ಜೆಯಾ?
ಚಾಚು *:ನಾ* ಎಂದು ನಾಲಿಗೆಯಾ?

*:ಗುರ್ರ್* ಎಂದು ಘರ್ಜಿಸು
ಕೋಪತಾಪ ಪ್ರದರ್ಶಿಸು

ಅಚ್ಚರಿ, ಉದ್ಗಾರ, ಭಯ?
*:ಓ* ಓಹ್ ಎಂದಗಲಿಸು ಬಾಯ

ಬಿಂಬಿಸು ಪ್ರಶಂಸೆಯ ಪರಮಾನ್ನ
*ಚಿಂಚಿ* ಅಂದ್ರೆ ಚಿಂದಿ ಚಿತ್ರಾನ್ನ

- ಈ ಕವನವನ್ನು ಬರೆದವರು ಮನ, ಆಃದ ಕಾರಣ ಮನಾರ್ಪಣಮಸ್ತು :ಹ

7 Comments:

Blogger Manju said...

namaskara saar.........
nimma abhimaana vanna mechchidhe.......
aadhare kannada script gaLu sari illa kanri ........
it conveys a wrong meaning or it is just not possible to understand the script in blogs n goolge.....
better take a pic of the scripts and then blog it..........

4:26 AM  
Blogger Anveshi said...

ಬಿಬಿನ
ಅಂತ ಹೇಳಿದ್ಕೂಡ್ಲೇ....
ಡಸ್ಟ್ (ಬಿ)ಬಿನ್ ಅಂತ ಪಕ್ಕದಲ್ಲೇ ಕೂಗಾಡಿದರಲ್ಲಾ...
!!!!

6:04 AM  
Blogger ಮನಸ್ವಿನಿ said...

ಚಿಂಚಿ :)

ಚೆನ್ನಾಗಿದೆ,ಹೊಸ ಪ್ರಯೋಗ.

8:27 PM  
Blogger Phantom said...

@ ಮಂಜು

ಇದನ್ನು ಓದಿ.

http://manadamaatu.blogspot.com

:)

1:42 AM  
Blogger Phantom said...

@ಅಸತ್ಯಾನ್ವೇಷಿ

:ಓ

:ಹ

1:43 AM  
Blogger Phantom said...

@ಮನಸ್ವಿನಿ

ಹೆ ಹೆ. ನೀನು ಶುರು ಹಚ್ಕೊಳ.

ಭೂತ

1:44 AM  
Blogger Enigma said...

wow "BCM" bahala chenangi mudibandide :) " Ha ha ha"

12:24 PM  

Post a Comment

<< Home