Thursday, September 14, 2006

ಅನ್ಯ ಭಾಷೆ

ಹಿಂದಿ ಹೇರಿಕೆ ವಿರೋಧಿಸುವ ದಿನದಂದು (ಸೆಪ್ಟೆಂಬರ್ ೧೪),
ನಾನು ಎಂದೊ ಬರೆದ ಕವನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ!


ತೆರೆದಿಹರು ನವ ಪುಟಗಳನ್ನು,
ಹೇರಿ ಭಾಷೆ ತಲೆಗೆ,
ಅನ್ಯ ಭಾಷೆಗಿಲ್ಲ ಎಲ್ಲೆ,

ಮೂಲಭಾಷೆ ಮೂಲೆಗೆ!

ಹಿರಿಯ ನರಿಯ ಕೄರ ಸಂಚಿದೆ,
ಕಣ್ಕಟ್ಟಿಗೆ ಬೆರಗಾಗದಿರಿ,
ನುಣುಪಾದ ಕತ್ತಿಯ ಚೂಪು ಅಂಚಿದೆ,
ಮೌನದಿ ಸಮ್ಮತಿ ನೀಡದಿರಿ!

ಅಭಿಮಾನ ಒಂದೆ ಇರುವ ಒಡವೆ,
ಕೀಳರಿಮೆಯೊಳು ಬಳಲದಿರಿ,
ಮಲತಾಯಿ ಅಳ್ವಿಕೆ ಎದುರಿಸಿ ನಡೆವೆ,
ಆತ್ಮ ವಿಶ್ವಾಸ ಕಳೆಯದಿರಿ!

-ರಮೇ

Thursday, September 07, 2006

"ಸ್ಮಿತೆ" ಅರ್ಪಣಮಸ್ತು

ಕನ್ನಡ ಸ್ಮಿತೆಗಳನ್ನು ಜಗತ್ತಿಗೆ ಪರಿಚಯಿಸುವ ಸುಯೋಗ ಕೂಡಿಬಂದಿದೆ.

ನಗೋಕ್ ಚಿಂತೆ ಯಾಕ್ ಮರಿ;
*:ಹ :ಹ :ಹ* ಹಲ್ಕಿರಿ

ತಡೆಯಕ್ಕಾಗದಿದ್ರೆ ನಿನ್ನ ನಗು
*ಬಿಬಿನ* ಅಂತ ಬಿದ್ದು ಬಿದ್ದು ನಗು
ಅಥವಾ
*ಎಬಿನ* ಅಂತ ಎದ್ದು ಬಿದ್ದು ನಗು

ಹೊಟ್ಟೆನೋವಿಗೆ ಸಿದ್ಧವಿದ್ರೆ,
*ನೆಮೇಬಿಬಿನ* ಅಂತ
ನೆಲದಮೇಲೆ ಬಿದ್ದು ಬಿದ್ದು ನಗು

ಹತಾಶೆಯ ಕಿಡಿಕಾರಬೇಕೆ?
*ಕಕಾಂ* ಎಂಬ ಕರ್ಮಕಾಂಡ ಸಾಕೆ?

ಗೆಳೆಯನೊಡನಾಡಬೇಕೆ ಹರಟೆಯ ಪ್ರಸಂಗ?
ಪ್ರಾರಂಭಿಸು *ಶಿಶಂ* ಅಂತ, ಶಿವನೇ ಶಂಭುಲಿಂಗ

ಸಂಕೋಚ ಮತ್ತು ಲಜ್ಜೆಯಾ?
ಚಾಚು *:ನಾ* ಎಂದು ನಾಲಿಗೆಯಾ?

*:ಗುರ್ರ್* ಎಂದು ಘರ್ಜಿಸು
ಕೋಪತಾಪ ಪ್ರದರ್ಶಿಸು

ಅಚ್ಚರಿ, ಉದ್ಗಾರ, ಭಯ?
*:ಓ* ಓಹ್ ಎಂದಗಲಿಸು ಬಾಯ

ಬಿಂಬಿಸು ಪ್ರಶಂಸೆಯ ಪರಮಾನ್ನ
*ಚಿಂಚಿ* ಅಂದ್ರೆ ಚಿಂದಿ ಚಿತ್ರಾನ್ನ

- ಈ ಕವನವನ್ನು ಬರೆದವರು ಮನ, ಆಃದ ಕಾರಣ ಮನಾರ್ಪಣಮಸ್ತು :ಹ