Monday, March 12, 2007

ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...

ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಸೇಂದಿ ಅಂಗ್ಡಿ ಮುಂಗಟಿನ್ ಸಾಲಾಗ್ ನಿಂತೆ ನಾ;
ಬಿರಟೆ ತಿರಗ್ಸಿ ಮುನಿಯ ತುಂಬ್ದ ಒಂದು ಬುಂಡೆ ನಾ;
ಎತ್ತಿ ಎತ್ತಿ ಕುಡ್ತಿದ್ದಂಗೆ ಒಂದೊಂದ್ ಗುಟ್ಕು ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಪಕ್ದಲ್ ನಿಂತಿದ್ ವೈದನ್ ಮ್ಯಾಗೆ ಕೈಯ್ಯ ಮಡಗ್ದೆ ನಾ;
ಏಟೊ ವರ್ಸದ್ ನೆಂಟನ್ ಥರ ಮಾತೀಗ್ ಕುಂತೆ ನಾ;
ಬುಂಡೆ ಖಾಲಿ ಮಾಡಿ ತರಸ್ದೆ ಮತ್ತೊಂದ್ ಬುಂಡೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಖಾರ್ವಾದ್ ಚಟ್ನಿ, ಉಪ್ಪಿನ ಕಾಯಿ ಮದ್ಯೆ ಮಡಗ್ಸ್ದೆ ನಾ;
ಕುಡಿತ ಕುಡಿತ ಖಾರನ್ ಕೂಡ ನೆಕ್ತ ಇದ್ದೆ ನಾ;
ಎರಡು ಸೇರಿ, ನೆತ್ತಿಗ್ ಏರಿ, ತಿರುಗ್ಸ್ತು ತಲೇ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಅರ್ದ ತುಂಬಿದ್ ಐದ್ನೆ ಬುಂಡೆ ಕೈನಾಗ್ ಮಡ್ಕೊಂಡ್ ನಾ;
ಗೀರನ್ ತಿರ್ಗಿ ಎದ್ದು ನಿಂತೆ ಮನ್ಕಡ್ ಓಗೋಕ್ ನಾ,
ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ!

ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

-ರಮೇ

34 Comments:

Blogger Jagali bhaagavata said...

ಭೂತಪ್ಪೋ,

ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ! - ಯಪ್ಪೋ, ನನ್ ಕೈಲಿ ತಡಕಳಕಾಯ್ತಿಲ್ಲ. ನಕ್ಕು ನಕ್ಕು ಸುಸ್ತಾಗೋತು ಕಣಪ್ಪೋ. ಏಟ್ ಚೇನ್ನಾಗ್ ಬರ್ದೀವ್ರಿ ಕವನಾನ. ವಸಿ ನಿಮ್ ಪಾದದ್ ಕ್ಸೆರಾಕ್ಸ್ ಮಾಡ್ಸಿ ಕಳ್ಸಪ್ಪೋ. ಉಸಾರು ಕಣಪ್ಪೋ, ಅಂಗೇ ತೂಲಾಡ್ಕೊಂಡು ಚರಂಡಿಗ್ ಬುದ್ಬುಟ್ಟೀಯ ಆಮ್ಯಾಕೆ.

8:00 PM  
Blogger ಮನಸ್ವಿನಿ said...

ಭೂತಪ್ಪ,

ಏನಾಯ್ತೊ ನಿಂಗೆ!....ತೀರ್ಥ ಸೇವನೆ ಜಾಸ್ತಿ ಆಗಿತ್ತು ಅಂತಾ ಕಾಣುತ್ತೆ...ನೀನು ಯಾಕೆ ಮಾಯ ಆಗಿದ್ದು ಅಂತ ನಂಗೆ ಈಗ ಗೊತ್ತಾಯ್ತು...

ಹುಷಾರೋ....ಸರಿಯಾಗಿ ಗೂಡು ಸೇರ್ಕೊ. ಮುಂದೆ ನೋಡ್ಕೊಂಡು ಹೋಗೊ ಮಾರಾಯ!

8:49 PM  
Blogger Phantom said...

ಶರಣು ಶರಣು ಹೇ ಭಾಗವತ್ತೊತ್ತಮ,

ನಿನ್ನ ಪ್ರತಿಕ್ರಿಯೆಗೆ ಧ.ವಾ. ಚರಂಡಿಯಾಗೆ ಯಾವತ್ತು ಬಿದ್ದಿಲ್ಲ ಬಿಡಪ್ಪೊ.

ಇಂತಿ
ಭೂತ

12:18 AM  
Blogger Phantom said...

ಮನಸ್ವಿನಿ,

ಹೂನ್, ತೂಲಾಡ್ತ ಇರೋದು ರಸ್ತೆ, ನಾನಲ್ಲ. ಹೆಂಗೊ ಗೂಡ್ ಸೇರ್ಕೊತಿನಿ.

ಇನ್ ಮುಂದೆ, ಬೇರೆ ಥರಹ ಅಮಲು ಏರಿಲಿಕ್ಕು ಅಲ್ದ?

ಇಂತಿ
ಭೂತ

12:26 AM  
Blogger ಸುಪ್ತದೀಪ್ತಿ suptadeepti said...

ಭೂತಯ್ಯ,
"ಜೋಲಾಗಿತ್ತ ಪಾಲ್ಟಿ? ತೂಲಾಡಿದ್ಯ ಯಾ ಪಾಟಿ?
ಮೆತ್ಗೆ ಕನೋ, ಜ್ವಾಪಾನ. ಲಸ್ತೇಗೂ ಕುಡ್'ಸ್ಬೇಡ ಎಂಡಾನ."

6:18 PM  
Blogger Sushrutha Dodderi said...

ಹೇಳ್ದೆ ಹೇಳ್ದೆ, ಕಮ್ಮಿ ಕುಡೀರಿ ಅಂತ; ಕೇಳ್ದ್ರಾ? ಇನ್ನೊಂದೇ ಪೆಗ್ಗು, ಇನ್ನೊಂದೇ ಬುಂಡೆ ಅಂತ ಕುಡ್ದೂ ಕುಡ್ದೂ ಈಗ ಲಸ್ತೆ ತೂಲಾಡ್ತೈತೆ ಅಂದ್ರೆ ಏನನ್ಲಿ?

10:02 PM  
Blogger Shiv said...

ನಿಮ್ಮ ಬ್ಯುಸಿ ಸೇಂದಿ ಸಮಯದ ನಡುವೆ ಈ ಕವನ ಕೊಟ್ಟು ಕಿಕ್ ಹೊಡಿಸಿದ್ದಕ್ಕೆ ನಿಮಗೆ ಇನ್ನೊಂದು ಬುಂಡೆ..

ಮುನಿಯ ತರ್ಲಾ ಈ ಕಡೆ ರಮೇಶಣ್ಣಂಗೆ ಇನ್ನೊಂದ ಬುಂಡೆಯಾ..

ಸಾಮಿ, ಪ್ರ್ಯಾನ್ಸ್ ನಾಗೂ ಬುಂಡೆ,ಸೇಂದಿ ಸಿಗ್ತಾತ?

1:08 AM  
Blogger Phantom said...

ಸೂಪ್ತದೀಪ್ತಿ,

ಕೇಳ್ಬೇಡಿ, ಏಸ್ ಕುಡಿದ್ರು ಅಮಲೇ ಏರ್ಲಿಲ್ಲ ಅಂತೀವ್ನಿ.

ಧ.ವಾ. ಪ್ರತಿಕ್ರಿಯೆ ಗೆ.

ಇಂತಿ
ಭೂತ

5:37 AM  
Blogger Phantom said...

ಸುಶೃತ,

ಮುಂದಿನ್ ಕಿತ ಕಮ್ಮಿ ಕುಡಿತಿನಿ ಕಣ್ರಲ. ಈ ಒಂದ್ ಕಿತ ಬುಟ್ಬುಡಿ.

ಇಂತಿ
ಭೂತ

5:39 AM  
Blogger Phantom said...

ಶಿವ್,

ಧ.ವಾ. ಪ್ರತಿಕ್ರಿಯಿಸಿದಕ್ಕೆ. ಇನ್ ಮುಂದೆ ಸ್ವಲ್ಪ ಬಿಡುವಾಗತ್ತೆ. ಆದ್ರಿಂದ ಬ್ಲಾಗ್ ಗಳ ಕಡೆ ಮತ್ತೆ ಗಮನ ಹರಿಸ ಬೊಹುದು. ಇಲ್ಲಿ ಸೇಂದಿ ಸಿಗೊಲ್ರಿ, ಜವರ ಬತ್ತ ಇದ್ದ ಬೆಂಗು ಇಂದ, ಮುನಿಯನ್ ಕೈನಾಗೆ ಒಂದ್ ಕಳ್ಸು ಅಂದಿದ್ದೆ.

ಇಂತಿ
ಭೂತ

5:41 AM  
Blogger Sandeepa said...

ಗೌರ್ಮೆಂಟ್ ಎಂಡ ನಿಲ್ಲುಸ್ತಾರಂತೆ ಕಣಣ್ಣೋ..
ಇನ್ಮುಂದೆ ಕಳ್ಬಟ್ಟೀನೇ ಗತಿ!

4:48 AM  
Blogger ರಾಜೇಶ ಹೆಗಡೆ / Rajesh Hegde / राजेश हेगडे said...

Tumba chennagide...

Please visit

http://www.vismayanagari.com

ವಿಸ್ಮಯ ನಗರಿ - Fastest growing Kannada Community Site

iMti Nimmava
-- Rajesh Hegde

6:39 AM  
Blogger Enigma said...

correct kudka thuradbeku :-P belbeku :-P amele maneli hendthi kaylli hodiskobeku avaglu avnu kudka anno title ge hakkudara

7:58 AM  
Blogger ವಿಕ್ರಮ ಹತ್ವಾರ said...

ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ
ticklish twist.....nice poem

Rgds,
Vicky

5:48 AM  
Blogger ಜಯಂತ ಬಾಬು said...

kudita kudita kudita....
ondalla ondu kavana khaMDita..

Sooooopar aagide..

samayaviddalli ..nanna blognalli madireya mattu nodi..

anda haage GP yavara stylenalli kavana full kick hoditu..

6:50 PM  
Blogger alex said...

This comment has been removed by a blog administrator.

9:05 AM  
Blogger alex said...

This comment has been removed by a blog administrator.

5:54 PM  
Blogger alex said...

This comment has been removed by a blog administrator.

1:31 AM  
Blogger alex said...

This comment has been removed by a blog administrator.

6:27 AM  
Blogger alex said...

.. .. .. .. .. .. .. .. .. .. .. .. .. .. ...

1:36 AM  
Blogger Shree said...

'ತೂಲಾಡಿ ತೂಲಾಡಿ' ಗೂಡ್ ಸೇರ್ಕೊಂಬಿಟ್ಟವ್ರು ಇನ್ನೂ ಎದ್ದಿಲ್ಲ ಅನ್ಸತ್ತೆ? ಬೆಳ್ಗಾಗ್ಬಿಟ್ಟಿದೆ, ಜಗತ್ತು ಎಷ್ಟೋ ರೌಂಡ್ ಹೊಡ್ದಿದೆ, ಎದ್ದೇಳಿ ಸಾಯಿಬ್ರೆ, ಮತ್ತೇನಾದ್ರು ಬರೀರಿ!!!

1:47 AM  
Blogger ಬಾನಾಡಿ said...

Visit another Kannada blog www.banadi.blogspot.com and leave your comments and if you like it provide a link from your blog

6:11 AM  
Blogger ಮಲ್ಲಿಕಾಜು೯ನ ತಿಪ್ಪಾರ said...

ತುಂಬಾ ಚೆನ್ನಾಗಿ ಬರೆದಿದ್ದೀರಾ.. ನೀವು ದಿನಾಲೂ ತೋಳಲಾಡ್ದಾ ಇರ್ತೀರಿ ಅನ್ಸುತ್ತೆ.. ಎಷ್ಟಾದ್ರೂ ಅನುಭ ಇಧ್ರೆ ತಾನೆ ಹೀಗೆ ಬರೆಯೋಕೆ ಸಾಧ್ಯ... Any how poem is very nice

6:19 AM  
Blogger Susheel Sandeep said...

ಅಣ್ಣಾ ಸುಮ್ಕೆ ನನ್ ಪಾಡುಗ್ ನಾ ಕೈನಾಗ್ ಒಂದ್ ಬುಂಡೆ ಇಡ್ಕಂಡ್ ಓಯ್ತಿದ್ನಾ...ತೂರಾಡ್ತಾ ತೂರಾಡ್ತಾ ಇಲ್ಲಿಗ್ ಬಂದು ಬಿದ್ದೆ!ಎಲ್ಲ ಮೂರ್ ಮೂರ್ ಕಾಣ್ಸುದ್ರೂ ದಿಟವಾಗಿ ನಿನ್ ಕವನಾನ ಒಂದೇ ಕಿತ ಓದಿದ್ದು ನಾ...ಈಗ ಎದ್ದು ತೂರಾಡ್ಕೊಂಡೇ ಮನೆ ಕಡೆ ಒಂಟೀವ್ನಿ...ಸಂಜೆ ಸೇಂದಿ ಅಂಗಡಿ ತಕ್ಕೆ ಬರ್ವಾಗ ಮಿಸ್ಡ್ ಕಾಲ್ ಕೊಡಲಾ ಭೂತಣ್ಣ! :)

1:30 AM  
Blogger Susheel Sandeep said...

ಅವ್ನ್ಯಾರಲ ಅಲೆಕ್ಸು..? ಸ್ಪ್ಯಾಮರ್! ಕಿತ್ತು ಬಿಸಾಕ್ಲ

1:31 AM  
Blogger Banavasi Balaga said...

geLeyare,

kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

6:14 AM  
Blogger Anusha Vikas said...

shopkeeping is my favorite past time! nice poem! :)

-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

8:45 AM  
Blogger Unknown said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

10:38 PM  
Blogger sunaath said...

ನೀ ಮತ್‌ನಲ್ ಹಾಡಿದ ಹಾಡು
ಎಷ್ಟ್ ಚೆನ್ನಾಗಿದೆ ನೋಡು
ನಾನೂ ಕುಡ್ದು , ನಿನಗೆ
ಕೈಜೋಡಸ್ತೀನಿ ,ಗೆಳೆಯಾ!

ನಿಮ್ಮ ಎಲ್ಲ ಕವನಗಳನ್ನು ಇಂದು ನೋಡಿದೆ. ತುಂಬಾ ಸೊಗಸಾಗಿವೆ.Please carry on!

7:30 AM  
Blogger Unknown said...

hic hic,
ಏನ್ ಗುರೂ ಹಿನ್ಗ್ ಸಕ್ಕತ್ತಾಗ್ ಬರ್ದಿದ್ಯಾ!? ಓದ್ತ್ತ್ತಾಯಿದ್ದ೦ಗೆ ಕಿಕ್ ಹೊಡ್ಯಕ್ಕೆ ಶುರುವಾಗ್ಬುಟ್ಟದೆ. ಒಳ್ಳೆ ನ೦ ರತ್ನನ್ ಪದಗೊಳ್ನ್ ಓದ್ದ೦ಗಾಯ್ತು.


~ ಹರ್ಷ

8:36 PM  
Blogger Sridhar Raju said...

ನಮಸ್ಕಾರ ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ

12:19 PM  
Blogger MD said...

"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.

ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.

ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.

I apologize for spamming, but no other way to inform :-(

5:28 AM  
Blogger ಸುಪ್ತದೀಪ್ತಿ suptadeepti said...

ಏನಪ್ಪೋ ಭೂತಯ್ಯ, ಎಲ್ಲಿ ಕಾಣೆಯಾದೆ? ಪತ್ತೇನೇ ಇಲ್ಲ?
ವರ್ಷದ್ ಮೇಲಾಯ್ತು ಮುಖ ದರ್ಶನ ಆಗಿ. ಏನಾಗೋಯ್ತು?

ಇನ್ನೂ ಇಳ್ದಿಲ್ವಾ ಮಂಪರು? ಎದ್ದು ಬನ್ನಿ....

3:46 PM  
Blogger Unknown said...

Bhootappo,

husharu!!! kanla eevaga kala tumbe kettoytu... este nervagi nededru kelvomme charandine tooradta maimele beelutte hushar...

11:58 PM  

Post a Comment

<< Home