Sunday, July 02, 2006

ವರ್ಷಧಾರ

ಬೆತ್ತಲಗಿದ್ದ ಭೂಮಿ ನಾಚಿ ನೀರ್ ಕೇಳಿರಲು,
ಮೋಡಗಳು ನರ್ತಿಸುತ್ತ, ತಮ್ಮ ಅಂಗಗಳ ನೇವರಿಸಿ,
ಮುದುಡಿದ ಮೊಗದ ಮೇಲೆ ಮುತ್ತಿನ ರಾಶಿಯ ಸುರಿಸಿದ ಹಾಗೆ,
ಅವಳ ಅಡಿಅಡಿಯನ್ನು ಪನ್ನೀರಿನಿಂದ ನೆನೆಸಿತು.

ಉಬ್ಬಿದ ಕುಚಕ್ಕೆ ಬಿಳಿ ರವಿಕೆ ನೇಯಿಸಿ ಹೊಲಿಸಿ ತೊಡಿಸಿ,
ನಾಭಿಯನ್ನು ಹಾಲಿನಿಂದ ತುಂಬಿತು ಹನಿಗಳನ್ನು ಜೊತೆಗೂಡಿಸಿ,
ತಾ ಸವರಿದಲ್ಲೆಲ್ಲ ಮಣ್ಣನ್ನು ಚಿನ್ನೈಸಿ,
ನಲಿಯಿತು ಬೆತ್ತಲೆ ಮೈಗೆ ಹಸಿರು ಸೀರೆ ಉಡಿಸಿ.

ಇಂತಿಪ್ಪ ಮನ್ವಂತರಿಸಿ, ಆಲಿಸಿ ಅವಳ ಮೊರೆ,
ಚೊಚ್ಚಲ ಋತುಮತಿ ಯನ್ನಾಗಿಸಿತು ರತಿಯ ಗೆಳತಿಯ,
ಗರ್ಭಪಾತವಾದಲ್ಲೆಲ್ಲ ಬಿತ್ತಿ ನವ ಪಿಂಡ,
ಹೊಸ ಚಿಗುರಿನಿಂದ ಅಂಗಗಳನ್ನೆಲ್ಲ ಅಲಂಕರಿಸಿತು ಕಂಡ.

ವನವನವ ಉಬ್ಬಿಸಿದ, ಅವಳ ಬಾಯಾಡಿಕೆ ನೀಗಿಸಿದ, ನಿನ್ನ ಸ್ಪರ್ಶ ಮಾನ್ಯ,
ನಗ್ನ ಸುಂದರಿಗೆ ಉಡುಗೆ ತೊಡಿಸಿದ ವರ್ಷಋತು, ನೀನೆ ಧನ್ಯ!!!!!!

- ರಮೇ

8 Comments:

Blogger ಮನಸ್ವಿನಿ said...

ಪದ ಜೋಡಣೆ ಚಲೊ ಇದ್ದು. ಖುಶಿ ಆತು .

6:10 AM  
Blogger Phantom said...

ಮೆಚ್ಚಿದಕೆ ಖುಶಿ ಆತು :)
ಏರು ಪೇರಾಗಿದ್ದ ಕವನದಲಿ ಸ್ವಲ್ಪ ಬದಲಾವಣೆ ತಂದ ಮನ ನಿಗೆ ಚಿರರುಣಿ.

ಭೂತ

11:21 AM  
Blogger ಮನ | Mana said...

ಓಹ್! ಇದು ಕೊನೆಗೂ ಪ್ರಕಟಣೆಯಾಯ್ತಾ? :)
ಈ ಕವನಕ್ಕೆ, ರಾಗ ಸಂಯೋಜಿಸಿ, ಹಿನ್ನೆಲೆ ಸಂಗೀತದೊಡನೆ ಗಾಯನ ಪಾಡಿದರೆ, ಮತ್ತಷ್ಟು ಚಲೋ ಇರ್ತದೆ.

ಭೂತವೇ, ರೂಪಕಾಲಂಕಾರದ ಮಹಾಪೂರವೇ ಈ ವರ್ಷಧಾರೆಯಲ್ಲಿ ಧಾರಾಕಾರವಾಗಿ ಸುರಿಸಿಬಿಟ್ಟಿರುವೆ. ಒಂದು ಅತ್ಯಂತ ವಿಭಿನ್ನ ಪ್ರಯೋಗ!

ಅಂದಹಾಗೆ, "ಚಿರಋಣಿ" ಅಂತೆಲ್ಲಾ ದೊಡ್ಡಮಾತು ಬ್ಯಾಡ.

~ ಮನ

9:29 PM  
Blogger bhadra said...

ಬಹಳ ಬಹಳ ಚೆನ್ನಾಗಿದೆ ರಮೇಶ. ನಿಧಾನವಾಗಿ ಕವನಗಳು ಕಣ್ಣುಬಿಡುತ್ತಿದ್ದಕ್ಕೋ ಏನೋ ಕವನದ ಕ್ವಾಲಿಟಿ ಉತ್ತಮವಾಗುತ್ತಿದೆ. ವಿಕ್ಸತ್ ಗೆ ರಾಗ ಹಾಕಿ ಹಾಡೋಕ್ಕೆ ಹೇಳಿ, ರೆಕಾರ್ಡ್ ಮಾಡಿಸಿ. ಬಹಳ ಚೆನ್ನಾಗಿರುತ್ತದೆ.

9:28 AM  
Blogger Shiv said...

ಅಮೋಘವಾಗಿದೆ !

ಇಷ್ಟೊಂದು ಕಚಗುಳಿ ಇಡುವ ಉಪಮೆಗಳನ್ನು ಹೇಗೆ ಜೋಡಿಸಿದಿರಿ :)

9:49 PM  
Blogger Phantom said...

ಈ ಪದ್ಯವನ್ನು ಮೆಚ್ಚಿದ, ಮನ,ತವಿಶ್ರೀ ಹಾಗು ಶಿವ್ ಗೆ ನನ್ನ ಧನ್ಯವಾದಗಳು.

ಭೂತ

4:59 AM  
Blogger MD said...

ಏನ್ ಬರ್ದೀರಿ ಸಾಹೇಬ್ರ..
ಭಾಳ ಛಂದ ಐತಿ ನೋಡ್ ಮಾರಯ್ಯ.
ಧನಿ, ಇನ್ನೂ ಹಿಂತಾವಾ ಪದ್ಯ ಬರ್ಲಿ
ನಾವೂ ಓದಿ ಓದಿ ಸುಖಾ ಪಡ್ಲಿ.

2:41 PM  
Blogger Sandeepa said...

ವಾಹ್ ವಾಹ್!
ಅದ್ಭುತ, ಅದ್ಬುತ!!
ಇಷ್ಟವಾಯ್ತು ತುಂಬಾನೆ..

8:31 AM  

Post a Comment

<< Home