tag:blogger.com,1999:blog-296697222024-03-07T15:56:57.278-08:00ಕಾವ್ಯ ಸುಧೆಇದು ನಿಂತ ನೀರಲ್ಲ, ಹರಿವ ಝರಿ. ನನ್ನ ಕಲ್ಪನೆಗಳನ್ನು ಪದಗಳಿಂದ ಶೃಂಗರಿಸಿ, ಪದ್ಯ ರೂಪ ಕೊಡುವ ಒಂದು ಪ್ರಯತ್ನವೇ ಈ ಕಾವ್ಯಸುಧೆ.Phantomhttp://www.blogger.com/profile/00512279534664860670noreply@blogger.comBlogger10125tag:blogger.com,1999:blog-29669722.post-83811490233567607582007-03-12T05:12:00.000-07:002010-07-06T22:59:35.806-07:00ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಸೇಂದಿ ಅಂಗ್ಡಿ ಮುಂಗಟಿನ್ ಸಾಲಾಗ್ ನಿಂತೆ ನಾ;
ಬಿರಟೆ ತಿರಗ್ಸಿ ಮುನಿಯ ತುಂಬ್ದ ಒಂದು ಬುಂಡೆ ನಾ;
ಎತ್ತಿ ಎತ್ತಿ ಕುಡ್ತಿದ್ದಂಗೆ ಒಂದೊಂದ್ ಗುಟ್ಕು ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಪಕ್ದಲ್ ನಿಂತಿದ್ ವೈದನ್ ಮ್ಯಾಗೆ ಕೈಯ್ಯ ಮಡಗ್ದೆ ನಾ;
ಏಟೊ ವರ್ಸದ್ ನೆಂಟನ್ ಥರ ಮಾತೀಗ್ ಕುಂತೆ ನಾ;
ಬುಂಡೆ ಖಾಲಿ ಮಾಡಿ ತರಸ್ದೆ ಮತ್ತೊಂದ್ ಬುಂಡೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಖಾರ್ವಾದ್ ಚಟ್ನಿ, ಉಪ್ಪಿನ ಕಾಯಿ ಮದ್ಯೆ ಮಡಗ್ಸ್ದೆ ನಾ;
ಕುಡಿತ ಕುಡಿತ ಖಾರನ್ ಕೂಡ ನೆಕ್ತ ಇದ್ದೆ ನಾ;
ಎರಡು ಸೇರಿ, ನೆತ್ತಿಗ್ ಏರಿ, ತಿರುಗ್ಸ್ತು ತಲೇ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

ಅರ್ದ ತುಂಬಿದ್ ಐದ್ನೆ ಬುಂಡೆ ಕೈನಾಗ್ ಮಡ್ಕೊಂಡ್ ನಾ;
ಗೀರನ್ ತಿರ್ಗಿ ಎದ್ದು ನಿಂತೆ ಮನ್ಕಡ್ ಓಗೋಕ್ ನಾ,
ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ!

ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?

-ರಮೇPhantomhttp://www.blogger.com/profile/00512279534664860670noreply@blogger.com34tag:blogger.com,1999:blog-29669722.post-1163112862811598072006-11-09T14:50:00.000-08:002006-11-09T22:41:19.290-08:00ಆಕರ್ಷಣೆಸಂಜೆ ಸೂರ್ಯ ಪಡೆದನು
ಅಂಗಲಾಚಿ ನಿನ್ನ;
ಸಿಗ್ಗಿನಿಂದ ಕೆಂಪಾದ,
ಆ ಕೆನ್ನೆ ಬಣ್ಣ!

ಮಲ್ಲಿಗೆ ಬಳ್ಳಿ ಕದ್ದಳು,
ನೇವರಿಸಿ ನಿನ್ನ;
ತೊಗಲಿನಲಿ ಅಡಗಿದ್ದ,
ಮಾದಕ ಕಂಪನ್ನ!

ಕೋಗಿಲೆ ತಾನು ಕಲಿತಳು,
ಅನುಸರಿಸಿ ನಿನ್ನ;
ಕೊರಳಿನಲಿ ಅರಳಿದ್ದ,
ಮಧುರ ನಾದವನ್ನ!

ಇರುಳು ತಾನು ಸೆಳೆದಳು,
ಓಲೈಸಿ ನಿನ್ನ;
ಕೇಶದಲಿ ಕರಗಿದ್ದ,
ತೀಕ್ಷ್ಣ ಕರುಪನ್ನ!

-ರಮೇPhantomhttp://www.blogger.com/profile/00512279534664860670noreply@blogger.com21tag:blogger.com,1999:blog-29669722.post-1160221638228485822006-10-07T04:43:00.000-07:002006-10-08T01:31:35.736-07:00ಮಂದಹಾಸಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ

ಜುಳು ಜುಳು ನೀರಿನ ಶಬ್ದದ ಪ್ರಾಸ;
ನಿನ್ನಯ ಕೊರಳಲಿ ಶಾಶ್ವತ ವಾಸ!
ಕಿಲ ಕಿಲ ನಗುವನು ಕಲಿಯಿತು ಕೋಗಿಲೆ;
ನಿನ್ನಯ ನಗುವಿಗೆ ನಲಿಯಿತು ನೈದಿಲೆ! - ಚರಣ ೧

ಮೊಗದಲಿ ಹೊರಟಿತು ನಗುವಿನ ನೌಕೆ;
ತುಟಿಗಳು ಅರಳಿ ಮೂಡಿತು ರೇಖೆ - ಪಲ್ಲವಿ

ಕಾರ್ಮೋಡ ಕಲೆತಾಗ, ಮಯೂರ ನರ್ತನ;
ಕಂಗಳದು ಬೆರೆತಾಗ, ನಿನ್ನ ನಗುವಿನ ಸಿಂಚನ!
ತಂಗಾಳಿಗು ನಿನ್ನ ನಗಿಸುವ ಆಸೆ;
ಮೆಲ್ಲಗೆ ನಗುವ ಕದಿಯುವ ಆಸೆ! - ಚರಣ ೨

-ರಮೇPhantomhttp://www.blogger.com/profile/00512279534664860670noreply@blogger.com12tag:blogger.com,1999:blog-29669722.post-1158222169855636522006-09-14T01:20:00.000-07:002006-09-14T01:26:34.926-07:00ಅನ್ಯ ಭಾಷೆಹಿಂದಿ ಹೇರಿಕೆ ವಿರೋಧಿಸುವ ದಿನದಂದು (ಸೆಪ್ಟೆಂಬರ್ ೧೪),
ನಾನು ಎಂದೊ ಬರೆದ ಕವನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ!

ತೆರೆದಿಹರು ನವ ಪುಟಗಳನ್ನು,
ಹೇರಿ ಭಾಷೆ ತಲೆಗೆ,
ಅನ್ಯ ಭಾಷೆಗಿಲ್ಲ ಎಲ್ಲೆ,
ಮೂಲಭಾಷೆ ಮೂಲೆಗೆ!

ಹಿರಿಯ ನರಿಯ ಕೄರ ಸಂಚಿದೆ,
ಕಣ್ಕಟ್ಟಿಗೆ ಬೆರಗಾಗದಿರಿ,
ನುಣುಪಾದ ಕತ್ತಿಯ ಚೂಪು ಅಂಚಿದೆ,
ಮೌನದಿ ಸಮ್ಮತಿ ನೀಡದಿರಿ!

ಅಭಿಮಾನ ಒಂದೆ ಇರುವ ಒಡವೆ,
ಕೀಳರಿಮೆಯೊಳು ಬಳಲದಿರಿ,
ಮಲತಾಯಿ ಅಳ್ವಿಕೆ ಎದುರಿಸಿ ನಡೆವೆ,
ಆತ್ಮ ವಿಶ್ವಾಸ ಕಳೆಯದಿರಿ!

-ರಮೇPhantomhttp://www.blogger.com/profile/00512279534664860670noreply@blogger.com3tag:blogger.com,1999:blog-29669722.post-1157638865493456942006-09-07T07:08:00.000-07:002006-09-07T07:24:13.626-07:00"ಸ್ಮಿತೆ" ಅರ್ಪಣಮಸ್ತುಕನ್ನಡ ಸ್ಮಿತೆಗಳನ್ನು ಜಗತ್ತಿಗೆ ಪರಿಚಯಿಸುವ ಸುಯೋಗ ಕೂಡಿಬಂದಿದೆ.

ನಗೋಕ್ ಚಿಂತೆ ಯಾಕ್ ಮರಿ;
*:ಹ :ಹ :ಹ* ಹಲ್ಕಿರಿ

ತಡೆಯಕ್ಕಾಗದಿದ್ರೆ ನಿನ್ನ ನಗು
*ಬಿಬಿನ* ಅಂತ ಬಿದ್ದು ಬಿದ್ದು ನಗು
ಅಥವಾ
*ಎಬಿನ* ಅಂತ ಎದ್ದು ಬಿದ್ದು ನಗು

ಹೊಟ್ಟೆನೋವಿಗೆ ಸಿದ್ಧವಿದ್ರೆ,
*ನೆಮೇಬಿಬಿನ* ಅಂತ
ನೆಲದಮೇಲೆ ಬಿದ್ದು ಬಿದ್ದು ನಗು

ಹತಾಶೆಯ ಕಿಡಿಕಾರಬೇಕೆ?
*ಕಕಾಂ* ಎಂಬ ಕರ್ಮಕಾಂಡ ಸಾಕೆ?

ಗೆಳೆಯನೊಡನಾಡಬೇಕೆ ಹರಟೆಯ ಪ್ರಸಂಗ?
ಪ್ರಾರಂಭಿಸು *ಶಿಶಂ* ಅಂತ, ಶಿವನೇ ಶಂಭುಲಿಂಗ

ಸಂಕೋಚ ಮತ್ತು ಲಜ್ಜೆಯಾ?
ಚಾಚು *:ನಾ* ಎಂದು ನಾಲಿಗೆಯಾ?

*:ಗುರ್ರ್* ಎಂದು ಘರ್ಜಿಸು
ಕೋಪತಾಪ ಪ್ರದರ್ಶಿಸು

ಅಚ್ಚರಿ, ಉದ್ಗಾರ, ಭಯ?
*:ಓ* ಓಹ್ ಎಂದಗಲಿಸು ಬಾಯ

ಬಿಂಬಿಸು ಪ್ರಶಂಸೆಯ ಪರಮಾನ್ನ
*ಚಿಂಚಿ* ಅಂದ್ರೆ ಚಿಂದಿ ಚಿತ್ರಾನ್ನ

- ಈ ಕವನವನ್ನು ಬರೆದವರು ಮನ, ಆಃದ ಕಾರಣ ಮನಾರ್ಪಣಮಸ್ತು :ಹPhantomhttp://www.blogger.com/profile/00512279534664860670noreply@blogger.com7tag:blogger.com,1999:blog-29669722.post-1155211587313765502006-08-10T05:04:00.000-07:002006-08-10T05:20:28.610-07:00ಹುಸಿ-ಹನಿಹುಸಿ ಮುನಿಸಿನ ಮರೆಯಲ್ಲಿ ಒಲವಿದೆ,
ಕಚಗುಳಿ ಇಡುವಂತ ಕಲೆ ಇದೆ!

ಹುಸಿ ಕೋಪದ ನೆರಳಲ್ಲಿ ತಂಪಿದೆ,
ಮದವೇರಿಸುವಂತ ಕಂಪಿದೆ!

ಹುಸಿ ಮೌನದ ಬೆನ್ನಲ್ಲೆ ಮಂದಹಾಸವಿದೆ,
ಸ್ಪರ್ಶಿಸಲಾಗದಂತ ಸ್ನೇಹವಿದೆ!

ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ,
ಸ್ಪಂದಿಸುವಂತ ಮನಸಿದೆ!

ಹುಸಿ ಧೈರ್ಯದ ಚಾವಿನಡಿ ಮೃದು ಮೊಗ್ಗಿದೆ,
ನೀರಾಗಿಸುವಂತ ಸಿಗ್ಗಿದೆ!

-ರಮೇPhantomhttp://www.blogger.com/profile/00512279534664860670noreply@blogger.com15tag:blogger.com,1999:blog-29669722.post-1153050623191134012006-07-16T04:45:00.000-07:002006-07-16T04:50:23.203-07:00ಅಂಕಇಲ್ಲಿ ಅಂಕ ಎಂಬ ಪದವನ್ನು ಪ್ರಶಂಸೆ ಎಂದು ಪರಿಗಣಿಸತಕ್ಕದ್ದು :)

ಬಸಿದಾ ನೀರೂ ಆವಿಯಂಗೆ ಹಾರಿ,
ಮುಂಜಾವಿನ ಶೀತಕ್ಕೆ ಹನಿಗಳಾಗಿ ಕೂಡಿ,
ಒಂದೊಂದು ಮುತ್ನಂತೆ ಬಿದ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಕಾರ್ಮೋಡ ಜಡಿಹಿಡಿದು ಮುಂದಕ್ಕೆ ಬಾಗಿ,
ಸೊರಗಿದಾ ಭೂಮ್ಯಾಗೆ ಜೀವಕಳಿ ತುಂಬಿ,
ಮೈದುಂಬಿ ನನ್ ತಾಯಿ ನಕ್ಯಾಳ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಬಿಳಿ ಹಾಲ ಕೆನ್ಯಾ ಒಂದೆಡೆ ಕಲೆ ಹಾಕಿ,
ಕತ್ಲಾದ ಬಾನಲ್ಲಿ ದೀಪದ ಬಳ್ಳಿ ಬೆಳಗಿ,
ಸರಧಾಂಗೆ ತಾರೆಗಳ ಪೊಣ್ಸ್ಯವ ನೋಡ;
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಚೈತ್ರದಲಿ ಮಾಮರದಿ ಕೋಗಿಲೆಯು ಕೂಗಿ,
ಮುಸ್ಸಂಜೆ ಬೆಳಕಲ್ಲಿ ಆರತಿಯು ಬೆಳಗಿ,
ಜೊತೆಯಾಗಿ ಸ್ವಾಗತವ ಕೋರ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

-ರಮೇPhantomhttp://www.blogger.com/profile/00512279534664860670noreply@blogger.com14tag:blogger.com,1999:blog-29669722.post-1151863482920028932006-07-02T11:02:00.000-07:002006-07-02T11:36:38.336-07:00ವರ್ಷಧಾರಬೆತ್ತಲಗಿದ್ದ ಭೂಮಿ ನಾಚಿ ನೀರ್ ಕೇಳಿರಲು,
ಮೋಡಗಳು ನರ್ತಿಸುತ್ತ, ತಮ್ಮ ಅಂಗಗಳ ನೇವರಿಸಿ,
ಮುದುಡಿದ ಮೊಗದ ಮೇಲೆ ಮುತ್ತಿನ ರಾಶಿಯ ಸುರಿಸಿದ ಹಾಗೆ,
ಅವಳ ಅಡಿಅಡಿಯನ್ನು ಪನ್ನೀರಿನಿಂದ ನೆನೆಸಿತು.

ಉಬ್ಬಿದ ಕುಚಕ್ಕೆ ಬಿಳಿ ರವಿಕೆ ನೇಯಿಸಿ ಹೊಲಿಸಿ ತೊಡಿಸಿ,
ನಾಭಿಯನ್ನು ಹಾಲಿನಿಂದ ತುಂಬಿತು ಹನಿಗಳನ್ನು ಜೊತೆಗೂಡಿಸಿ,
ತಾ ಸವರಿದಲ್ಲೆಲ್ಲ ಮಣ್ಣನ್ನು ಚಿನ್ನೈಸಿ,
ನಲಿಯಿತು ಬೆತ್ತಲೆ ಮೈಗೆ ಹಸಿರು ಸೀರೆ ಉಡಿಸಿ.

ಇಂತಿಪ್ಪ ಮನ್ವಂತರಿಸಿ, ಆಲಿಸಿ ಅವಳ ಮೊರೆ,
ಚೊಚ್ಚಲ ಋತುಮತಿ ಯನ್ನಾಗಿಸಿತು ರತಿಯ ಗೆಳತಿಯ,
ಗರ್ಭಪಾತವಾದಲ್ಲೆಲ್ಲ ಬಿತ್ತಿ ನವ ಪಿಂಡ,
ಹೊಸ ಚಿಗುರಿನಿಂದ ಅಂಗಗಳನ್ನೆಲ್ಲ ಅಲಂಕರಿಸಿತು ಕಂಡ.

ವನವನವ ಉಬ್ಬಿಸಿದ, ಅವಳ ಬಾಯಾಡಿಕೆ ನೀಗಿಸಿದ, ನಿನ್ನ ಸ್ಪರ್ಶ ಮಾನ್ಯ,
ನಗ್ನ ಸುಂದರಿಗೆ ಉಡುಗೆ ತೊಡಿಸಿದ ವರ್ಷಋತು, ನೀನೆ ಧನ್ಯ!!!!!!

- ರಮೇPhantomhttp://www.blogger.com/profile/00512279534664860670noreply@blogger.com8tag:blogger.com,1999:blog-29669722.post-1151094931503619452006-06-23T13:31:00.000-07:002006-08-04T07:18:04.486-07:00ಇವಳೆ...ಕೋಟಿ ಸೂರ್ಯನ ಕಾಂತಿ ಮೈಗೂಡಿಸಿ ನಕ್ಕಳೊ,
ಇರುಳಾದ ಬಾಳಿನಲ್ಲಿ ಬೆಳಕನ್ನು ತಂದಳೊ,
ಹುಚ್ಚೆದ್ದ ಅಲೆಗಳಂತೆ, ಕನಸಿಗು ಹುರುಪು ಬಂತೆ,
ದಿಕ್ಕಿರದ ಹಾದಿಯಲ್ಲಿ; ಇವಳೆ ಚಂದ್ರಕಾಂತೆ!

ಸುಂದರಾ ಮುಖದ ಕೇಂದ್ರ ಅಗಲವಾದ ಕಂಗಳೋ,
ಅವಳ್ ತುಟಿಯ ಅಂಚಿನಲ್ಲಿ ಹಾಲ್ಜೇನ ಹನಿಗಳೊ,
ರೂಪ ರಾಶಿಯ ರಮಣಿ, ಮಿಂಚು ನೋಟದ ಮೋಹಿನಿ,
ಸಾರಂಗದ ದೃಷ್ಟಿ ದೋಚಿದ; ಇವಳೆ ಮೃಗನಯನಿ!

ಬಿದಿಗೆ ಚಂದ್ರನ ನಾಚಿಸಿವ ಡೊಂಕಾದ ನಡುವಿನವಳೊ,
ಮನ್ಮಥನ ಮಣಿಸಬಲ್ಲ ರತಿಯ ತವರಿನವಳೊ,
ವಾಸುಕಿ ಸ್ಪರ್ಶ ಧನ್ಯೆ, ಸಾಟಿ ಇರದ ಅನನ್ಯೆ,
ಬಳ್ಳಿಯ ನಿದ್ದೆ ಕೆಡಿಸಿದ; ಇವಳೆ ನಾಗಕನ್ಯೆ!

ಸುವಾಸನೆ ಸೂಸುವಂತ ಮಲ್ಲಿಗೆ ವದನದವಳೊ,
ಮುಟ್ಟಿದರೆ ಮಾಸುವಂತ ಕಮಲದ ತೊಗಲಿನವಳೊ,
ಕರೆಯದೆ ಬಂದ ವನಿತೆ, ವರವಾದ ಭಾಗ್ಯದಾತೆ,
ದುಂಬಿಯ ಮೊದಲ ಪ್ರೇಮಿ; ಇವಳೆ ಕುಸುಮಸಂಜಾತೆ!

-ರಮೇ Phantomhttp://www.blogger.com/profile/00512279534664860670noreply@blogger.com8tag:blogger.com,1999:blog-29669722.post-1150231803614452012006-06-13T13:49:00.000-07:002006-06-14T12:42:07.060-07:00ಬಾ ಬೆಳಕೆಬಾ ಬೆಳಕೆ ಬಾ ಬೆಳಕೆ ಮರಳಿ ಎನ್ನ ಬಳಿಗೆ,
ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತೆ,
ದು:ಖ ದೂಡುವ ನೆವದಿ, ಬೆಳಕೆ ಬಾ ಬಳಿಗೆ!

ಮುಂಜಾನೆ ಮೂಡಣದಿ ನಿನ್ನ ಬೆಳಕೇ ಚೆಲ್ಲಲಿ,
ಅದನ ನೋಡುತ ತಾವರೆ ತನ್ನ ಮೈಯ್ಯ ಮರೆಯಲಿ,
ಪದ್ಮ ಪರಿಮೆಯೊಳಿರುವ ಹೂಗಳೆದೆ ಅಂದ,
ಹಿಗ್ಗಿಸುವ ಅಮೃತವ ಬೆಳಕೆ ತಾ ಬಳಿಗೆ!

ಮುಸುಕು ಕವಿದ ಕಂಗಳಿಗೆ ನಿನ್ನ ಬೆಳಕೆ ಕಾಂತಿಯು,
ಮಬ್ಬು ಹರಿದು, ಜ್ಞಾ ನ ಚಿಗುರಿ, ದೂರವಾಗಲಿ ಚಿಂತೆಯು,
ಮನದಲ್ಲಿ ಆಶಯದ ಮಳೆಬಿಲ್ಲು ಮೂಡಿದೆ,
ವರ್ಣ ವೃದ್ಧಿಸುವ ಕುಂಚ, ಬೆಳಕೆ ತಾ ಬಳಿಗೆ!

-ರಮೇPhantomhttp://www.blogger.com/profile/00512279534664860670noreply@blogger.com11